ಪ್ರೇಮಕುಮಾರ ಹರಿಯಬ್ಬೆ
ಪ್ರೇಮಕುಮಾರ ಹರಿಯಬ್ಬೆ
ಪ್ರೇಮಕುಮಾರ ಹರಿಯಬ್ಬೆ ಅವರು ಹಿರಿಯ ಪತ್ರಕರ್ತರಾಗಿ, ಅಂಕಣಕಾರರಾಗಿ ಮತ್ತು ಬರಹಗಾರರಾಗಿ ಹೆಸರಾದವರು.
ಪ್ರೇಮಕುಮಾರ ಹರಿಯಬ್ಬೆ ಅವರು 1952ರ ಮೇ 7ರಂದು ಜನಿಸಿದರು. ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹರಿಯಬ್ಬೆ ಗ್ರಾಮದವರು.
ಪ್ರೇಮಕುಮಾರ ಅವರು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನವನ್ನು ಆರಂಭಿಸಿ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲಾ ವರದಿಗಾರರಾಗಿ, ನಂತರ ಪ್ರಜಾವಾಣಿ ಭಾನುವಾರದ ವಿಶೇಷ ಪುರವಣಿಯ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಪ್ರೇಮಕುಮಾರ ಹರಿಯಬ್ಬೆ ಅವರ ಪ್ರಕಟಿತ ಕೃತಿಗಳಲ್ಲಿ ಸತ್ತವರು (1980), ದೇವಕಣಗಿಲೆ (2010), ಅಕಾಲ (2021) ಕಥಾ ಸಂಕಲನಗಳು ಸೇರಿವೆ. ಅಂಕಣಕಾರರಾಗಿಯೂ ಅವರು ಹೆಸರಾಗಿದ್ದಾರೆ.
ಪ್ರೇಮಕುಮಾರ ಹರಿಯಬ್ಬೆ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ 2018ನೇ ಸಾಲಿನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನಾಗಡಿಕೆರೆ– ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಪ್ರೇಮಕುಮಾರ ಹರಿಯಬ್ಬೆ ಅವರು ನನ್ನ ಅನೇಕ ಬರಹಗಳನ್ನು ಇಲ್ಲಿ ಓದಿ ಪ್ರೋತ್ಸಾಹಿಸಿದ್ದಾರೆ.
ಹಿರಿಯ ಸಾಧಕರಾದ ಸಹೃದಯ ಪ್ರೇಮಕುಮಾರ ಹರಿಯಬ್ಬೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Premkumar Hariyabbe Sir 🌷🙏🌷
ಕಾಮೆಂಟ್‌ಗಳು