ಮೇಘನಾ ಸುಧೀಂದ್ರ
ಮೇಘನಾ ಸುಧೀಂದ್ರ
ಯುವ ತಂತ್ರಜ್ಞರಾದ ಮೇಘನಾ ಸುಧೀಂದ್ರ ಕನ್ನಡದ ಬರಹಗಾರ್ತಿಯಾಗಿಯೂ ಹೆಸರಾಗಿದ್ದಾರೆ.
ಮೇಘನಾ "ಜಯನಗರದ ಹುಡುಗಿ" ಅಂಕಣ ಮತ್ತು ತಮ್ಮ ಬ್ಲಾಗ್ನಿಂದ ಜಯನಗರದ ಹುಡುಗಿಯೆಂದೇ ಜನಪ್ರಿಯರಾದವರು. ಹೀಗಾಗಿ ಅವರ ಊರು ಬೆಂಗಳೂರು ಎಂದು ಬೇರೆ ಹೇಳಬೇಕಾಗಿಲ್ಲ. ತಂದೆ ಪ್ರಸಿದ್ಧ ವಿಜ್ಞಾನಿ, ತಂತ್ರಜ್ಞಾನಿ, ಶಿಕ್ಷಕ ಮತ್ತು ಕನ್ನಡದ ಬರಹಗಾರರಾಗಿದ್ದ ಸುಧೀಂದ್ರ ಹಾಲ್ದೊಡ್ಡೇರಿ. ತಾಯಿ Sowmya Suma. 'ಸಂಯುಕ್ತ ಕರ್ನಾಟಕ’ದ ಪ್ರಸಿದ್ಧ ಸುದ್ದಿ ಸಂಪಾದಕರೂ, ಬರಹಗಾರರೂ ಆಗಿದ್ದ ಹೆಚ್. ಆರ್. ನಾಗೇಶರಾವ್ ಇವರ ತಾತ. ಹೀಗಾಗಿ ಕನ್ನಡದ ಸವಿ ಇವರೊಂದಿಗೆ ಸಹಜವಾಗಿ ಸುಲಲಿತವಾಗಿ ಜೊತೆಗೂಡಿದೆ. ಮೇಘನಾ ಅವರು ಓದಿದ್ದು Master of Science in Artificial Intelligence and Signal Processing. ದೂರದ ಬಾರ್ಸಿಲೋನಾದಲ್ಲಿದ್ದು ಈ ಹೆಚ್ಚಿನ ಶೈಕ್ಷಣಿಕ ಸಾಧನೆ ಸಾಧಿಸಿದರು. ಮೇಘನಾ ಅವರು ಪ್ರಸಿದ್ಧ ಅಂತರರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೇಘನಾ ಬಾರ್ಸಿಲೋನಾದಲ್ಲಿದ್ದಾಗಲೇ ಒನ್ ಇಂಡಿಯಾದಲ್ಲಿ ಹಳೆ ಬೆಂಗಳೂರಿನ ಕಥೆಗಳು, ಪ್ರಸಂಗಗಳನ್ನ ಅಂಕಣ ರೂಪದಲ್ಲಿ “ಜಯನಗರದಹುಡುಗಿ” ಎಂಬ ಕಾಲಂ ಅನ್ನು ಮೂಡಿಸಿದರು. ಇದಲ್ಲದೆ ‘ಪ್ರಜಾವಾಣಿ’ಯ ಭೂಮಿಕಾ ಪುರವಣಿಯಲ್ಲಿ ಹೆಣ್ಣು ಮಕ್ಕಳ ವಿಷಯಗಳ ಬಗ್ಗೆ ಬರೆದಿದ್ದಾರೆ. 'ಅವಧಿ'ಯಲ್ಲಿ ಓಲಾ ಬಾರ್ಸಿಲೋನಾ’ ಎಂಬ ಅಂಕಣ ಸಹಾ ಬಂದಿದೆ. ಇವರ ಕಥೆಗಳು ಕತಲಾನ್ ಕಿಡಿ, 1 + 1 = 0, ಶಗುಫ್ತಾ , ವೃತ್ತ, ಅಮೃತ ಬುತ್ತಿ ಮುಂತಾದ ಕಥೆಗಳು ಪ್ರಕಟಗೊಂಡಿವೆ. ಇವರು 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾಗಿದ್ದರು. ಅವಳಿ ಮಕ್ಕಳ ತಾಯಿಯಾಗಿರುವ ಅವರು ಆ ಅನುಭವಗಳ ಕುರಿತೂ ಪತ್ರಿಕೆಯಲ್ಲಿ ಬರೆದಿದ್ದಾರೆ.
ಮೇಘನಾ ಅವರ ಪ್ರಕಟಿತ ಕೃತಿಗಳಲ್ಲಿ ಜಯನಗರದ ಹುಡುಗಿ, ಲಿಪಿಯ ಪತ್ರಗಳು #AI ಕಥೆಗಳು, ಬೆಂಗಳೂರು ಕಲರ್ಸ್, ಪ್ರೀತಿ ಗೀತಿ ಇತ್ಯಾದಿ, ಅಂಗಳದಿಂದ ಬೈನರಿಯವರೆಗೆ, ವಾಕಿಂಗ್ ಚಿತ್ರಗಳು, ಪಾಥೇರಸ್ ಇತ್ಯಾದಿ ಸೇರಿವೆ.
ಮೇಘನಾ ಅವರ ಇತರ ಆಸಕ್ತಿಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ, ಚಾರಣ ಮುಂತಾದವು ಸೇರಿವೆ. ಕನ್ನಡ ಬಾರದವರಿಗೆ ಕನ್ನಡ ಕಲಿಸುವಿಕೆಯಲ್ಲೂ ಅವರ ಕೊಡುಗೆ ಸಲ್ಲುತ್ತಿದೆ.
ಮೇಘನಾ ಸುಧೀಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

Happy birthday Meghana Sudhindra
ಕಾಮೆಂಟ್‌ಗಳು