ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀಣಾ ಭಟ್


 ವೀಣಾ ಭಟ್ 


ವೀಣಾ ಭಟ್ ನಾ ಫೇಸ್ಬುಕ್ಕಿಗೆ ಬಂದ ದಿನಗಳಿದಲೂ ನನಗೆ ಅಪಾರ ಪ್ರೇರಣೆ. 

ವೀಣಾ ಭಟ್ ಅವರು ಮೊದಲು ನನ್ನ ಪ್ರೇರಿಸಿದ್ದು ಅವರ ಛಾಯಾಗ್ರಹಣದಿಂದ. ಅದರಲ್ಲೂ ಅವರ ಕ್ಯಾಮರಾ ಕಣ್ಣು ಪ್ರಕೃತಿಯನ್ನು ಆರಾಧಿಸುವ ರೀತಿಯಿಂದ.  ನಾನು ಅವರಿಗೆ ಯಾವುದೇ ಕಾಪಿರೈಟ್ಸ್ ಬೆಲೆ ಕೊಡದೆ, ಅವರ ಹವ್ಯಾಸವನ್ನು ರೂಢಿಸಿಕೊಂಡಿದ್ದೇನೆ.  ಅವರೊಬ್ಬ ಅದ್ಭುತ ಚಿತ್ರಗಾತಿಯೂ ಆಗಿದ್ದಾರೆ.  ನಾನೊಮ್ಮೆ ಹಾಕಿದ್ದ ಕಬ್ಬನ್ ಪಾರ್ಕ್ ಚಿತ್ರವನ್ನು ನೋಡಿ ಇಲ್ಲಿರುವ ಹಸುರಿನ ನಡುವೆ ಮೂಡಿರುವ ಬೆಳಕನ್ನು ಅವರು ಮೂಡಿಸಿದ್ದರು.

ವೀಣಾ ಭಟ್ ಉತ್ತಮ ಬರಹಗಾರ್ತಿ.  ಅವರ ಪ್ರಬಂಧಗಳು ಮತ್ತು ಪ್ರವಾಸಿ ಲೇಖನಗಳು ಅವರದೇ ಭವ್ಯ ಛಾಯಾಚಿತ್ರಗಳ ಸಂಯೋಗದಲ್ಲಿ ನಿರಂತರ  ಪತ್ರಿಕೆಗಳಲ್ಲಿ ಮೂಡುತ್ತ ಬಂದಿವೆ. 

ಎಂದೂ ಲೋಕವನ್ನು ಪಾಸಿಟಿವ್ ಆಗಿ ನೋಡುವ ವೀಣಾ ಅವರದ್ದು ಸದಾ ಸುಂದರ ಹಸನ್ಮುಖ. ಅವರ ಆತ್ಮೀಯ, ಸ್ನೇಹಯುಕ್ತ, ಹಸನ್ಮುಖಿ, ಕಲಾತ್ಮಕ, ಪ್ರತಿಭಾ ಭಾವಗಳು ನಮ್ಮನ್ನು ನಿರಂತರ ಪ್ರೇರಿಸುತ್ತಿರಲಿ. ಆತ್ಮೀಯರಾದ ವೀಣಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಫೋಟೋ ಕೃತಜ್ಞತೆ: ವೀಣಾ ಭಟ್ ಮತ್ತು Ram Naresh Manchi

Happy birthday Veena Bhat 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ