ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿದ್ಯಾರಶ್ಮಿ ಪೆಲತ್ತಡ್ಕ


ವಿದ್ಯಾರಶ್ಮಿ ಪೆಲತ್ತಡ್ಕ

ವಿದ್ಯಾರಶ್ಮಿ ಪೆಲತ್ತಡ್ಕ ಪತ್ರಕರ್ತೆಯಾಗಿ ಮತ್ತು ಬಹುಮುಖಿ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.  

ಜುಲೈ 16 ವಿದ್ಯಾರಶ್ಮಿ ಅವರ ಜನ್ಮದಿನ.  ಇವರು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಇವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ  ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.  

ವಿದ್ಯಾರಶ್ಮಿ ಪೆಲತ್ತಡ್ಕ ಅವರು ಕನ್ನಡಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್  ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ನಂತರದಲ್ಲಿ, ವಿಜಯ ಕರ್ನಾಟಕದ ಪುರವಣಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ವಿದ್ಯಾರಶ್ಮಿ ಪೆಲತ್ತಡ್ಕ ಅವರ ಬಹುಮುಖಿ ಬರಹಗಳು ನಾಡಿನ ಪ್ರಸಿದ್ಧ ನಿಯತಕಾಲಿಕಗಳು ಮತ್ತು ಅಂತರಜಾಲದಲ್ಲಿ ನಿರಂತರ ಪ್ರಕಾಶಿಸುತ್ತಿವೆ. ಪ್ರಸಕ್ತದಲ್ಲಿ ವಿಜಯಕರ್ನಾಟಕದಲ್ಲಿ ಮೂಡಿಬರುತ್ತಿರುವ 'ಮುಗಿಲ ಹಕ್ಕಿ'ಯೂ ಸೇರಿದಂತೆ ಇವರ ಅಂಕಣ ಬರಹಗಳು  ಜನಪ್ರಿಯ.

ವಿದ್ಯಾರಶ್ಮಿ ಪೆಲತ್ತಡ್ಕ ಅವರ ಪ್ರಕಟಿತ ಕೃತಿಗಳಲ್ಲಿ 'ಗೌರೀದುಃಖ’ ಮತ್ತು 'ಕೆರೆ-ದಡ' ಕವನ ಸಂಕಲನಗಳು ಸೇರಿವೆ.  ಇವರು ನಿರೂಪಿಸಿರುವ ಯಕ್ಷಗಾನ ಕ್ಷೇತ್ರದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರ ಆತ್ಮಕಥೆ 'ಯಕ್ಷ ಗಾನ ಲೀಲಾವಳಿ' ಕೃತಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ಸಂದಿದೆ.   ಇವರು 'ಕವಿಗೆ ಕವಿ ಮಣಿದ ಪರಿ' ಎಂಬ ಗೋಕಾಕರ ಕುರಿತ ಕವಿತೆಗಳನ್ನು ಸಂಪಾದಿಸಿದ್ದಾರೆ.  

ವಿದ್ಯಾರಶ್ಮಿ ಪೆಲತ್ತಡ್ಕ ಅವರಿಗೆ ವಿ.ಕೃ. ಗೋಕಾಕ್ ವಾಙ್ಮಯ ಟ್ರಸ್ಟ್ ಅವರಿಂದ ವಿ. ಕೃ. ಗೋಕಾಕರ ಕಾವ್ಯಗಳ ಅಧ್ಯಯನಕ್ಕಾಗಿನ ಫೆಲೊಷಿಪ್ ಸಂದಿದೆ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ 'ಮಯೂರವರ್ಮ ಸಾಹಿತ್ಯ ಪ್ರಶಸ್ತಿ' ಸಂದಿದೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಶಸ್ತಿ ಹಾಗೂ publishing next ಕೂಡುವ ಅತ್ಯುತ್ತಮ ವಿನ್ಯಾಸ, ಮುದ್ರಣ ಪ್ರಶಸ್ತಿ ಇವರ ಕೆರೆ ದಡ ಸಂಕಲನಕ್ಕೆ ಸಂದಿವೆ.  ಇವರಿಗೆ ಸಂದಿರುವ ಇತರ ಪ್ರಶಸ್ತಿಗಳಲ್ಲಿ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ'ಯೂ ಸೇರಿದೆ.

ಪ್ರತಿಭಾನ್ವಿತ ಪತ್ರಕರ್ತೆ ಮತ್ತು ಬರಹಗಾರ್ತಿ ವಿದ್ಯಾರಶ್ಮಿ ಪೆಲತ್ತಡ್ಕ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Vidyarashmi Pellathadka 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ