ಗೋಕುಲ ನಿರ್ಗಮನ
ಗೋಕುಲ ನಿರ್ಗಮನ
ಪು.ತಿ.ನ ಅವರ ‘ಗೋಕುಲ ನಿರ್ಗಮನ’ ಅತ್ಯುತ್ತಮ ನಾಟಕಗಳ ಸಾಲಿನಲ್ಲಿ ಪ್ರತಿಷ್ಠಿತವಾಗಿವೆ. ಕೃಷ್ಣನ ಬದುಕಿನಲ್ಲಿ ಮಹತ್ವದ ಘಟ್ಟವೊಂದನ್ನು ಆರಿಸಿಕೊಂಡು ಅವನಲ್ಲಾದ ಪರಿವರ್ತನೆಯು ಅವನ ಸುತ್ತಲಿನವರ ಮೇಲೆ ಬೀರುವ ಪರಿಣಾಮವನ್ನು ಚಿತ್ರಿಸುವುದು ಗೋಕುಲ ನಿರ್ಗಮನದ ವಸ್ತು. ಪೂರ್ವ ಯೌವನದ ಧೀರಲಲಿತ ವ್ಯಕ್ತಿತ್ವವನ್ನು, ವೇಣು ವಿಸರ್ಜನದಂತಹ ಸಾಂಕೇತಿಕ ಕ್ರಿಯೆಯಿಂದ ತ್ಯಜಿಸಿ, ಜೀವನದ ಜವಾಬ್ಧಾರಿಗಳನ್ನು ನಿರ್ವಹಿಸಲು ಕೃಷ್ಣನು ಸಿದ್ಧನಾಗುವ ಸನ್ನಿವೇಶವು ಇನ್ನಿಲ್ಲವೆನ್ನುವಷ್ಟು ಹೃದಯಂಗಮವಾಗಿ, ಸ್ವಪ್ನೋಪಮವಾಗಿ ಮೂಡಿಬಂದಿದೆ. ಪು.ತಿ.ನ ಅವರ ಕವಿತೆಗಳನ್ನೂ ಮೀರಿದೆ ಎಂಬಂತೆ ಗೋಕುಲ ನಿರ್ಗಮನ ನಾಟಕದ ಹಾಡುಗಳು ಜನರನ್ನು ಅಪಾರವಾಗಿ ಆಕರ್ಷಿಸಿವೆ. ನಾಟಕದ ಒಳಗಿನಿಂದ ನೇರವಾಗಿ ಚಿಮ್ಮುವ ಹಾಡುಗಳು ಆಲೋಚಿಸಲಾರದಷ್ಟು ತತ್ಕಾಲೀನವಾಗಿವೆ. ಗೋಕುಲ ನಿರ್ಗಮನ ನಾಟಕ, ಬಿ.ವಿ. ಕಾರಂತ್, ಪ್ರತಿಭಾ ಪ್ರಹ್ಲಾದ್ ಮುಂತಾದವರಲ್ಲದೆ ಅನೇಕ ರಂಗತಂಡಗಳ ಪ್ರಯೋಗಗಳಲ್ಲಿ ಕೂಡಾ ಅಪಾರ ಜನಪ್ರಿಯತೆ ಕಂಡಿದೆ.
ಈ 'ಗೋಕುಲ ನಿರ್ಗಮನ' ದಿನಕ್ಕೊಂದು ಭಾಗದಂತೆ ಮುಂದಿನ 28 ದಿನಗಳ ಕಾಲ ನಿಮ್ಮೊಂದಿಗೆ ಅಸ್ವಾದಿಸುತ್ತಿದ್ದೇನೆ. ಈ ಕಾರ್ಯವನ್ನು ಸಂಕ್ಷಿಪ್ತ ಭಾವಾರ್ಥ ಸಹಿತ ಮಾಡಿಕೊಟ್ಟಿರುವ ಸಹೋದರಿ ಸುಬ್ಬುಲಕ್ಷ್ಮಿ Lrphks Kolar ಅವರಿಗೆ ಹೃದಯಪೂರ್ವಕ ಕೃತಜ್ಞತೆಗಳು.
ಕಾಮೆಂಟ್‌ಗಳು