ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿವಶ್ರೀ ಸ್ಕಂದಪ್ರಸಾದ್


 ಶಿವಶ್ರೀ ಸ್ಕಂದಪ್ರಸಾದ್


ಶಿವಶ್ರೀ ಸ್ಕಂದಪ್ರಸಾದ್ ಕರ್ನಾಟಕ ಸಂಗೀತ,  ಭರತನಾಟ್ಯ ಮತ್ತು ನಾಮಸಂಕೀರ್ತನ ಕಲಾವಿದೆ. ಅವರು ವರ್ಣಚಿತ್ರ ಕಲಾವಿದೆಯೂ ಆಗಿದ್ದಾರೆ. 

ಆಗಸ್ಟ್ 2, ಶಿವಶ್ರೀ ಸ್ಕಂದಪ್ರಸಾದ್ ಅವರ ಜನ್ಮದಿನ.  ಅವರ ತಮ್ಮ  ವಂಶಾವಳಿಯಲ್ಲಿ ಹರಿದು ಬಂದ ಕಲೆ, ಸಹಜ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಶಾಸ್ತ್ರೀಯ ಕಲೆಗಳ ಮೇಲಿನ ಒಲವಿನ ಮೂಲಕ ವೃತ್ತಿಪರ ಕಲಾವಿದೆಯಾಗಿ ರೂಪುಗೊಂಡಿದ್ದಾರೆ.  ಅವರು ಎಂಜಿನಿಯರಿಂಗ್ ಮತ್ತು ಜೀವಶಾಸ್ತ್ರದ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ತುಂಬಾ ಉತ್ಸುಕರಾಗಿದ್ದರಿಂದ ತಂಜಾವೂರಿನ ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಿ.ಟೆಕ್ (ಬಯೋ-ಎಂಜಿನಿಯರಿಂಗ್) ಪದವಿಯ ಅಧ್ಯಯನವನ್ನು  ಕೈಗೊಂಡರು.  ಇದಲ್ಲದೆ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಮತ್ತು ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿಗಳನ್ನು ಕೂಡ ಗಳಿಸಿದ್ದಾರೆ.

ಶಿವಶ್ರೀ ಸ್ಕಂದಪ್ರಸಾದ್ ಅವರು 64 ಭಾರತೀಯ ಕಲಾ ಪ್ರಕಾರಗಳ ಅಧ್ಯಯನಕ್ಕೆ ವ್ಯವಸ್ಥೆ ಹೊಂದಿರುವ ‘ಆಹುತಿ’ ಕಲಾ ಪ್ರತಿಷ್ಠಾಪನವನ್ನು ಅದರ ಸಂಸ್ಥಾಪಕ ನಿರ್ದೇಶಕರಾಗಿ ನಡೆಸುತ್ತಿದ್ದಾರೆ.  ವಿಶ್ವದಾದ್ಯಂತ ತಮ್ಮ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧರಾಗಿದ್ದಾರೆ. 

Thank you Suryakala Chandrashekar 🌷🙏🌷

On the birthday of popular musician, dancer and painter Sivasri Skandaprasad


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ