ಮಂಡ್ಯ ರವಿ
ಮಂಡ್ಯ ರವಿ
ಮಂಡ್ಯ ರವಿ ಕಿರುತೆರೆಯಲ್ಲಿ ಅಪಾರವಾಗಿ ಜನರ ಮನ ಸೆಳೆದಿದ್ದವರು. ಇಂದು ಇವರ ಸಂಸ್ಮರಣಾ ದಿನ.
ರವಿಪ್ರಸಾದ್ ಎಂಬ ಹೆಸರು ಹೊಂದಿದ್ದ ರವಿ, ಎಂ.ಎ., ಎಲ್.ಎಲ್.ಬಿ ಓದಿದರೂ ತಮ್ಮನ್ನು ಅಭಿನಯ ಕ್ಷೇತ್ರಕ್ಕೆ ಮೀಸಲಿಟ್ಟರು. ಅವರು ತಮ್ಮ ಪಾತ್ರಗಳಲ್ಲಿ ತನ್ಮಯರಾಗುತ್ತಿದ್ದ ರೀತಿ ಅಚ್ಚರಿಯ ಮೆಚ್ಚುಗೆ ಮೂಡಿಸುತ್ತಿತ್ತು. ಇದು ಕೇವಲ ಪ್ರೇಕ್ಷಕನೊಬ್ಬನ ಮಾತಲ್ಲ. ಅವರಿಂದ ತಮ್ಮ ಹಲವಾರು ಧಾರಾವಾಹಿಗಳಲ್ಲಿ ಪಾತ್ರ ಮಾಡಿಸಿದ್ದ ಪ್ರಸಿದ್ಧ ನಿರ್ದೇಶಕ ಟಿ. ಎನ್. ಸೀತಾರಾಮ್ “ಇನ್ನೂ 42..ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ..” ಎಂದು ತಮ್ಮ ಕಂಬನಿಯ ಸಂದೇಶದಲ್ಲಿ ನುಡಿದಿದ್ದ ಮಾತು ಈ ಪ್ರತಿಭೆಯ ಬಗ್ಗೆ ಬಹಳಷ್ಟು ಹೇಳುತ್ತದೆ.
ರಂಗಭೂಮಿಯ ಜೊತೆಯಲ್ಲಿ ನಂಟನ್ನು ಹೊಂದಿದ್ದ ಮಂಡ್ಯ ರವಿ ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸಿದ್ದರು. ಟಿ.ಎಸ್ ನಾಗಾಭರಣ ನಿರ್ದೇಶನದಲ್ಲಿ ಮೂಡಿಬಂದ 'ಮಹಾಮಾಯಿ’ ರವಿ ಅವರು ಮೊದಲು ನಟಿಸಿದ್ದ ಧಾರಾವಾಹಿ.
ಮುಂದೆ ರವಿ ಅವರು ಮಿಂಚು, ಮುಕ್ತ ಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮೀ ಸ್ಟೋರ್ಸ್, ಮಗಳು ಜಾನಕಿ, ನಮ್ಮನೆ ಯುವರಾಣಿ ಮುಂತಾದ ಅನೇಕ ಕಿರುತೆರೆಯ ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯರಾದರು. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಫೈಲ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು. ಹಲವಾರು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು.
ರವಿ 2022ರ ಸೆಪ್ಟೆಂಬರ್ 14ರಂದು ನಿಧನರಾದರು.ಇಷ್ಟು ಚಿಕ್ಕ ವಯಸ್ಸು, ಇಷ್ಟೊಂದು ಪ್ರತಿಭೆ. ಇಷ್ಟು ಬೇಗ ಹೋಗಬೇಕೆ? ಈ ಪ್ರಶ್ನೆ ಯಾರಿಗೆ ಕೇಳುವುದು. ಯಾವುದಕ್ಕೂ ಕಾಲ ಉತ್ತರ ಹೇಳುವುದಿಲ್ಲ.
On Remembrance Day of Mandya Ravi
ಕಾಮೆಂಟ್‌ಗಳು