ಸಚ್ಚಿದಾನಂದ ಮೂರ್ತಿ
ಕೆ. ಎಸ್. ಸಚ್ಚಿದಾನಂದ ಮೂರ್ತಿ
ಕೆ. ಎಸ್. ಸಚ್ಚಿದಾನಂದ ಮೂರ್ತಿ ರಾಷ್ಟ್ರಮಟ್ಟದಲ್ಲಿ ಸುದ್ದಿಮಾಧ್ಯಮದಲ್ಲಿ ಹೆಸರಾಗಿದ್ದವರು.
ಸಚ್ಚಿ ಎಂದು ಹೆಸರಾಗಿದ್ದ ಸಚ್ಚಿದಾನಂದ ಮೂರ್ತಿ ಅವರು 'ಇಂಡಿಯನ್ ಎಕ್ಸ್ಪ್ರೆಸ್' ಸಮೂಹದಲ್ಲಿ ಕಾರ್ಯನಿರ್ವಹಿಸಿ, 'ದಿ ವೀಕ್' (The Week) ನಿಯತಕಾಲಿಕೆ ಮತ್ತು ಮಲಯಾಳ ಮನೋರಮಾ (Malayala Manorama) ದೈನಿಕದ ದೆಹಲಿ ರೆಸಿಡೆಂಟ್ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.
ಸಚ್ಚಿದಾನಂದ ಮೂರ್ತಿ ಅವರು ಕೋಲಾರ ಜಿಲ್ಲೆಯ ಅಷ್ಟಗ್ರಾಮ ಎಂಬ ಗ್ರಾಮಕ್ಕೆ ಸೇರಿದವರು. ಇಂಡಿಯನ್ ಎಕ್ಸ್ಪ್ರೆಸ್ ಸಮೂಹದಲ್ಲಿದ್ದ ಅವರು, 1982ರ ನವೆಂಬರ್‌ನಲ್ಲಿ 'ದಿ ವೀಕ್'ನ ಬೆಂಗಳೂರು ವರದಿಗಾರರಾಗಿ ಕಾರ್ಯನಿರ್ವಹಿಸಿ, 2000 ವರ್ಷದ ಏಪ್ರಿಲ್‌ನಲ್ಲಿ 'ದಿ ವೀಕ್' ನಿಯತಕಾಲಿಕದ ಸ್ಥಾನೀಯ ಸಂಪಾದಕರಾಗಿ ನೇಮಿತಗೊಂಡರು.
2022ರ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗುವವರೆಗೂ ಅವರು ಮಲಯಾಳ ಮನೋರಮಾ ಪತ್ರಿಕಾ ಸಮೂಹದಲ್ಲಿ ನಿರಂತರ ಸೇವೆ ಸಲ್ಲಿಸಿದ್ದರು.
ಸಚ್ಚಿದಾನಂದ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಅನುಭವ ಪಡೆದಿರುವ ಅನೇಕರು ಇಂದು ವಿವಿಧ ಮಾಧ್ಯಮಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಕಿಡಿಗೇಡಿಗಳು ಬೆಂಗಳೂರಿನ ಇಂಡಿಯನ್ ಎಕ್ಸ್‌ಪ್ರೆಸ್ ಕಚೇರಿಗೆ ಅಗ್ನಿ ಸ್ಪರ್ಶ ಮಾಡಿದ ಸಂದರ್ಭದಲ್ಲಿ, ಕಚೇರಿ ಒಳಗೆ ಕೆಲಸ ನಿರ್ವಹಿಸುತ್ತಿದ್ದವರಲ್ಲಿ ಸಚ್ಚಿದಾನಂದ ಮೂರ್ತಿ ಸಹಾ ಒಬ್ಬರು. ಸಚ್ಚಿದಾನಂದ ಮೂರ್ತಿ ಅವರು ರಾಷ್ಟ್ರಪತಿಗಳಾಗದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪ್ರೀತಿ ಪಾತ್ರ ಪತ್ರಕರ್ತರಲ್ಲಿ ಒಬ್ಬರಾಗಿದ್ದರು.
ಸಚ್ಚಿದಾನಂದಮೂರ್ತಿ ಅವರು 2023ರ ಅಕ್ಟೋಬರ್ 13ರಂದು ತಮ್ಮ 68ನೇ ವಯಸ್ಸಿನಲ್ಲಿ ನಿಧನರಾದರು🌷🙏🌷
On Rememberance Day of Great journalist K. S. Sacchidananda Murthy 🌷🌷🌷
ಕಾಮೆಂಟ್‌ಗಳು