ವಿಶ್ವ ಹಿರಿಯರ ದಿನ
ವಿಶ್ವ ಹಿರಿಯರ ದಿನ
ವಿಶ್ವ ಹಿರಿಯರ ದಿನವಾದ ಇಂದು ನನ್ನನ್ನು ಪ್ರತಿನಿತ್ಯ ಇಲ್ಲಿ ಪ್ರೇರಿಸುತ್ತಿರುವ ಹಿರಿಯರನ್ನು ನಮಿಸುವ ಸಲುವಾಗಿ ನನ್ನೊಡನೆ ನಿರಂತರ ಸಂಪರ್ಕದಲ್ಲಿರುವ ಕೆಲವು ಹಿರಿಯರ ಚಿತ್ರಗಳನ್ನು ಇಲ್ಲಿ ಜೋಡಿಸಿರುವೆ. ಕಡಿಮೆ ಜಾಗವದ್ದರಿಂದ ಮತ್ತು ಸ್ನೇಹವಲಯ ದೊಡ್ಡದಿರುವುದರಿಂದ ಎಲ್ಲ ಹಿರಿಯರ ಚಿತ್ರಗಳನ್ನೂ ಪೋಣಿಸಲಾಗಿಲ್ಲ. ವಯಸ್ಸಿನ ಲೆಕ್ಕದಲ್ಲಿ ನಾನೂ ಹಿರಿಯರ ಪಟ್ಟಿಗೆ ಸೇರಿರುವವ.
ಬದುಕೆಂಬುದೇ ಒಂದು ಸವಾಲು. ಸವಾಲುಗಳು ಎಲ್ಲ ವಯಸ್ಸಿನವರಿಗೂ ಇದೆ. ಹಾಗಾಗಿ ವಿಶ್ವ ಹಿರಿಯರ ದಿನವನ್ನು ಹಿರಿಯ ವಯಸ್ಸಿನ ಬದುಕಿಗಿರುವ ಸವಾಲುಗಳ ನಿಟ್ಟಿನಲ್ಲೇ ಕಾಣಬೇಕೆಂದೇನೂ ಇಲ್ಲ. ಬದುಕನ್ನು ಗೌರವಿಸಿ, ಆಸ್ವಾದಿಸಿ, ಮುನ್ನಡೆಯುತ್ತಾ ಸಾಗುವುದೇ ಜೀವನ.
ಹಕ್ಕಿಗಳು ಒಟ್ಟಾಗಿ ಹಾರಿದಾಗಲೇ ಹೆಚ್ಚು ಪಯಣ ಸಾಧ್ಯ. ಹಾರುವ ಹಕ್ಕಿಗಳ ರೆಕ್ಕೆಯ ತೂಗುವಿಕೆ ಪರಸ್ಪರ ಎಲ್ಲ ಹಕ್ಕಿಗಳಿಗೂ ಪಯಣಕ್ಕೆ ಪುಷ್ಟಿದಾಯಕ. ಅಂತೆಯೇ ಬದುಕಿನಲ್ಲಿ ಪ್ರತಿಯೊಂದೂ ಬಾಳು ಮತ್ತೊಂದು ಬದುಕಿಗೆ ಪುಷ್ಟಿಯ ಸೆಲೆ.
ನಾನು ಪ್ರತಿಯೊಬ್ಬ ಹಿರಿಯರ ಜೊತೆ ಸಂವಹನ ನಡೆಸುವಾಗಲೂ ಅವರು ವಿಚಾರಗಳನ್ನು ಗ್ರಹಿಸಿ - ಸ್ಪಂದಿಸುವ ರೀತಿ, ಅವರು ತೆರೆದಿಡುವ ವಿಶಾಲ ನೆನಪುಗಳು ಮತ್ತು ಅವರ ಆಂತರ್ಯದಲ್ಲಿ ಆರದಿರುವ ಉತ್ಸಾಹದ ಮಿನುಗುಗಳನ್ನು ಗಮನಿಸುವಾಗಲೆಲ್ಲ "ಆಹಾ, ಬದುಕೇ ನೀನೆಷ್ಟು ಭವ್ಯ" ಎಂದುಕೊಳ್ಳುತ್ತೇನೆ. ಇದೇ ಬದುಕಿನ ನಿಜವಾದ ಹಿರಿತನ. ಆ ಹಿರಿತನಕ್ಕೆ ಸಾಷ್ಟಾಂಗ ನಮನ.
World Elders Day
ಕಾಮೆಂಟ್‌ಗಳು