ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೈ.ವಿ. ಗುಂಡೂರಾವ್


 ವೈ. ವಿ. ಗುಂಡೂರಾವ್


ವೈ. ವಿ. ಗುಂಡೂರಾವ್ ಅವರು ಸುಸಂಸ್ಕೃತ - ವಿನೋದಪೂರ್ಣ - ಸುಜ್ಞಾನಯುತ ವಿಷಯ ಪ್ರಸ್ತುತಿಗಳಿಗೆ ಹೆಸರಾದವರು. ಗುಂಡೂರಾವ್ ಮತ್ತು ಅ. ರಾ. ಮಿತ್ರ ಸಂಯೋಗದ 'ಕೊರವಂಜಿ - ಅಪರಂಜಿ' ಬಳಗದ 'ಹಾಸ್ಯಬ್ರಹ್ಮ'ದ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿನ ನಿರೂಪಣೆಗಳು ಕನ್ನಡಿಗರ ಮನದಲ್ಲಿ ಸದಾ ಹಸುರಾಗಿರವ ಸವಿ ನೆನಪುಗಳು.

ಅಕ್ಟೋಬರ್ 7, ಗುಂಡೂರಾವ್ ಅವರ ಜನ್ಮದಿನ. ಬೆಂಗಳೂರಿನಲ್ಲಿ ಓದಿ ಬೆಳೆದ ಇವರು 'ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್'ನಲ್ಲಿ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸ್ಥಾನದವರೆಗೆ ಜವಾಬ್ದಾರಿ ನಿರ್ವಹಿಸಿ ನಿವೃತ್ತರಾಗಿದ್ದಾರೆ.  ಕೌಶಲ್ಯಾಭಿವೃದ್ದಿ ಮಾರ್ಗದರ್ಶಕರಾಗಿ ಸಹಾ ಅವರ ಸೇವೆ ಸಲ್ಲುತ್ತಿದೆ.

ವೈ. ವಿ. ಗುಂಡೂರಾವ್ ಅವರು ಸುಮಧುರ ಧ್ವನಿಯ, ಸುಜ್ಞಾನ ಪ್ರೇರಕವಾದ, ಕೇಳಲು ಖುಷಿ ಎನಿಸುವ ವಿನೋದಯುತ ಮಾತು, ಉಪನ್ಯಾಸ, ನಿರೂಪಣೆ ಮುಂತಾದ ಪ್ರಸ್ತುತಿಗಳಿಗೆ ಹೆಸರಾದವರು.  ಅವರ ಬರವಣಿಗೆಗಳೂ ಅಷ್ಟೇ ಸುಂದರ.  ಈ ಸಾಮರ್ಥ್ಯದ ಹಿಂದೆ ಅಪಾರ ಸಾರ್ವಜನಿಕ ಬದುಕಿನ ಅನುಭವ, ಆಳವಾದ ಅಧ್ಯಯನ, ಸಮಾಜದ ಕುರಿತಾದ ಪ್ರೀತಿ ಕಾಳಜಿಗಳಿವೆ. ಹೀಗಾಗಿ ಅವರ ಕುರಿತು ಎಲ್ಲರಿಗೂ ಪ್ರೀತಿ. ಅವರು ಎಲ್ಲೆಡೆ ಆಹ್ವಾನಿತರು.

ವೈ. ವಿ. ಗುಂಡೂರಾವ್ ಅವರಿಗೆ ಎಷ್ಟೇ ಜನಪ್ರಿಯತೆ ಇದ್ದರೂ ಅವರ ಸರಳ ಸೌಜನ್ಯತೆ ಎಂದೂ ಕಡಿಮೆಯಾಗಿಲ್ಲ.  ಹಿರಿಯರ ಕಂಡರೆ ಗೌರವ, ಎಲ್ಲರಲ್ಲಿ ಪ್ರೀತಿ, ಅತಿರೇಕವನ್ನೆಂದೂ ಸಮೀಪಸದ ವಿನೋದ ಹೀಗೆ ಹಲವು ರೀತಿಯಲ್ಲಿ ಕನ್ನಡಿಗರಾದ ನಮಗೆ ಇವರು ಸದಾ ಆಪ್ತರು. ಗುಂಡೂರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday YV Gundu Rao Sir 🌷🙏🌷







ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ