ವೆಂಕಿ
ನಾನು ವೆಂಕಟೇಶಮೂರ್ತಿ ಅವರನ್ನು ಕಂಡಿರುವುದು ಕೆಲವೊಂದು ಸಮಾರಂಭಗಳಲ್ಲಿ. ಅದಕ್ಕೂ ಹೆಚ್ಚು ಸಮಾರಂಭಗಳ ಚಿತ್ರಗಳ ಮೂಲಕ! ಯಾವುದೇ ಸಮಾರಂಭ ಆದರೂ ಇಡೀ ಫೇಸ್ಬುಕ್ ವಲಯದಲ್ಲಿರುವವರ ಪ್ರೊಫೈಲ್ ಚಿತ್ರಗಳೆಲ್ಲ ಬದಲಾಗಿ, ವೆಂಕಟೇಶ ಮೂರ್ತಿ ಅವರು ತೆಗೆದ ಚಿತ್ರಗಳಾಗಿರುತ್ತವೆ. ಅಷ್ಟು ಸುಂದರವಾಗಿ ಚಿತ್ರ ತೆಗೆಯುತ್ತಾರೆ. ಆ ಭಾಗ್ಯ ನನಗೂ ದಕ್ಕಿದೆ.
ವೆಂಕಿ ಸುಂದರವಾಗಿ ತೆಗೆಯುವ ಮುಖಗಳಿರಲಿ, ನನಗೆ ಅತ್ಯಂತ ಮನಸೆಳೆಯುವುದು ವೆಂಕಿ ಅವರ ಪ್ರಶಾಂತ ಮಂದಹಾಸದ ಮುಖದ ಮಧ್ಯೆ ಕಾಣುವ ಅವರ ಹೊಳೆವ ಕಂಗಳು. ಅವರಲ್ಲಿ ಆಧ್ಯಾತ್ಮ ಪ್ರಜ್ಞೆ, ಸಂಗೀತ ಪ್ರಜ್ಞೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಜ್ಞೆಗಳು ಹಿತಮಿತವಾಗಿ ಸಮ್ಮಿಲನಗೊಂಡಿದೆ. ಅವರ ಡಾ. ವಸಂತ ಕವಲಿ ಅವರ ಶಿಷ್ಯರಾಗಿ ಸಂಗೀತವನ್ನೂ ಕಲಿತವರು.
ವೆಂಕಿ ಹೊಳೆವ ಕಂಗಳಲ್ಲಿ ತಪಸ್ವಿಯ ಮಂದಹಾಸದ ಚರ್ಯೆ ಇದೆ. ಅವರು ಶುಭಹಾರೈಸುವಾಗ 'ಶ್ರೀ ಗುರುರಾಘವೇಂದ್ರರ ಕೃಪೆ ಇರಲಿ' ಎನ್ನುವಾಗ ಗುರವರ್ಯರೇ ಅವರ ಮೂಲಕ ಹಾರೈಸುತ್ತಿರುವ ಭಾವ ಮೂಡುತ್ತದೆ.
ಇದು ಸದಾ ಇರಲಿ. ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು ಸಾರ್.
ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🎂🎉🍰🎁🍦💐😊
ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ,
ವೆಂಕಿ ಆಪ್ತತೆ ನಮಗೆ, ನಿತ್ಯಸುಖವಯ್ಯಾ 😇
Happy birthday Venkatesh Murthy Sir
ಕಾಮೆಂಟ್ಗಳು