ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತೇಜಸ್ವಿ ಸೂರ್ಯ


 ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ ಎಂದು ಪ್ರಸಿದ್ಧರಾಗಿರುವ ಲಕ್ಯ ಸೂರ್ಯನಾರಾಯಣ ತೇಜಸ್ವಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು. 

ತೇಜಸ್ವಿ ಸೂರ್ಯ 1990ರ  ನವೆಂಬರ್ 16ರಂದು ಜನಿಸಿದರು. ತಾಯಿ ರಮಾ.  ತಂದೆ ಡಾ. ಎಲ್. ಎ. ಸೂರ್ಯನಾರಾಯಣ.  ಸೂರ್ಯ ಅವರು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಇಂದ ಶೈಕ್ಷಣಿಕ ಕಾನೂನು ಪದವಿ ಹಾಗೂ ಎಲ್ ಎಲ್ ಬಿ ಪದವಿಯನ್ನು ಪಡೆದಿದ್ದಾರೆ.

ತೇಜಸ್ವಿ ಸೂರ್ಯ ಅವರು 9ನೇ ವಯಸ್ಸಿನಲ್ಲಿ, ಬೆಳಗಾವಿಯ ಸೈಂಟ್ ಪಾಲ್ ಶಾಲೆಯಲ್ಲಿ ಓದುವಾಗ,  ತಾವು ಬಿಡಿಸಿದ 17 ವರ್ಣಚಿತ್ರಗಳನ್ನು ಮಾರಾಟ ಮಾಡಿ 1220 ರೂಪಾಯಿ ಸಂಗ್ರಹಿಸಿ, ಅದನ್ನು ಶಾಲೆಯ ಮುಖ್ಯೋಪಾಧ್ಯಾಯರ  ಮೂಲಕ 'ಸೇನಾ ಕಾರ್ಗಿಲ್ ಪರಿಹಾರ ನಿಧಿಗೆ' ಕೊಟ್ಟಿದ್ದರು. 2001 ವರ್ಷದಲ್ಲಿ ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ಕುಮರನ್ಸ್ ಚಿಲ್ಡ್ರನ್ ಹೋಮ್‍ನಲ್ಲಿ ಇರುವಾಗ ಅವರಿಗೆ ಸೃಜನಶೀಲ ವಿಜ್ಞಾನ ಅನ್ವೇಷಣೆಗಾಗಿ ಮಕ್ಕಳಿಗೆ ನೀಡಲಾಗುವ 'ರಾಷ್ಟ್ರೀಯ ಬಾಲಶ್ರೀ ಪುರಸ್ಕಾರ' ಸಂದಿತ್ತು. 

ತೇಜಸ್ವಿ ಸೂರ್ಯ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಹೊಂದಿದ್ದಾರೆ.  ಇತ್ತೀಚೆಗೆ ವಿವಾಹವಾದ ಇವರ ಪತ್ನಿ ಶಿವಶ್ರೀ 
ಸ್ಕಂದಪ್ರಸಾದ್ ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದ ಜನಪ್ರಿಯ ಗಾಯಕಿ.

ತೇಜಸ್ವಿ ಸೂರ್ಯ ಅವರು  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸಕ್ರಿಯ ಕಾರ್ಯಕರ್ತರಾಗಿದ್ದರು ಮತ್ತು ಭಾರತೀಯ ಜನತಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅವರು "ಕರ್ನಾಟಕ ಬಿಜೆಪಿ ಡಿಜಿಟಲ್ ಕಮ್ಯುನಿಕೇಷನ್ಸ್" ತಂಡವನ್ನು 2018 ರ ಕರ್ನಾಟಕ ಶಾಸನಸಭಾ ಚುನಾವಣೆಯಲ್ಲಿ ಮುನ್ನಡೆಸಿ ರಾಷ್ಟ್ರೀಯ ಮನ್ನಣೆ ಪಡೆದರು. 'Arise India’ ಎಂಬ ಅವರು ಸ್ಥಾಪಿಸಿರುವ ಎನ್‍ಜಿಒ ಶಿಕ್ಷಣ ಕ್ಷೇತ್ರದಲ್ಲಿ ಶ್ರಮಿಸುತ್ತಿದೆ. 

ತೇಜಸ್ವಿ ಸೂರ್ಯ ಅವರು 2019ರ ಲೋಕಸಭಾ ಚುನಾವಣೆಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದು, 2024ರಲ್ಲಿ ಎರಡನೇ ಅವಧಿಯಲ್ಲೂ ಜಯಗಳಿಸಿ,  ಕಿರುವಯಸ್ಸಿನಲ್ಲೇ ಪ್ರಕಾಶಿಸಿದ್ದಾರೆ. ಅವರು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. 

ನಮ್ಮ ದೇಶಕ್ಕೆ ತೇಜಸ್ವಿ ಸೂರ್ಯ ಅವರಂತಹ  ಉತ್ಸಾಹಿ ಪ್ರತಿಭೆಗಳ ಅವಶ್ಯಕತೆ ತುಂಬಾ ಇದೆ. ಅವರಿಗೆ ಒಳಿತು ಮಾಡುವ ಶಕ್ತಿ ಮತ್ತು ಅವಕಾಶಗಳು ಹೆಚ್ಚು ಲಭಿಸಲಿ. ಅವರಿಗೆ ಮತ್ತು ಅವರಿಂದ ಸಮಾಜಕ್ಕೆ ಒಳಿತಾಗಲಿ.

Happy birth day to our young and energetic politician Tejasvi Surya 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ