ಟಿ. ಎಸ್. ಶ್ರೀವತ್ಸ
ಟಿ. ಎಸ್. ಶ್ರೀವತ್ಸ ನಾನು ವೈಯಕ್ತಿಕವಾಗಿ ಕಂಡಿರುವ ಅಪೂರ್ವ ನಿಷ್ಠಾವಂತ ಜನಸೇವಕ. ಅವರು ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ಜಯಗಳಿಸಿ ವಿಧಾನಸಭಾ ಸದಸ್ಯರಾಗಿದ್ದಾರೆ.
ನವೆಂಬರ್ 4, ಶ್ರೀವತ್ಸ ಅವರ ಜನ್ಮದಿನ. ಅವರು ಮೂಲತಃ ತಲಕಾಡಿನವರು.
ಶ್ರೀವತ್ಸ ನನ್ನ ಬಂಧು. ಅದಕ್ಕೂ ಮಿಗಿಲಾಗಿ ಅವರು ನನ್ನ ಆತ್ಮಿಯ ಗೆಳೆಯ. ಕಳೆದ ದಶಕದಲ್ಲಿ ಮೈಸೂರಿನಲ್ಲಿ ನಾನಿದ್ದ ಕೆಲವು ವರ್ಷಗಳಲ್ಲಿ ಅವರು ಪ್ರತಿದಿನ ನನ್ನೊಡನೆ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೆಳಗಿನ ವಾಕಿಂಗ್ ಮಾಡುತ್ತಿದ್ದರು. ಅವರು ಕುಕ್ಕರಹಳ್ಳಿ ಕೆರೆಯವರೆಗೆ ಮನೆಯಿಂದ ಬರುತ್ತಿದ್ದುದೂ ಸಾಧಾರಣ ಸೈಕಲ್ನಲ್ಲಿ.
ಅವರಿಂದ ಮೈಸೂರಿನ ಸಾಮಾಜಿಕ ವಲಯದಲ್ಲಿ ನನಗೆ ದೊರೆತ ಸ್ನೇಹ ಪರಿಚಯಗಳು ಅನೇಕ.
ಬ್ರಹ್ಮಚಾರಿಯಾದ ಶ್ರೀವತ್ಸ ಅವರು ಜನಸಮುದಾಯದಲ್ಲಿನ ಸಾಮಾನ್ಯರಿಗಾಗಿ ಮಿಡಿಯುತ್ತಿದ್ದ ರೀತಿಯನ್ನು ಕಣ್ಣಾರೆ ಕಂಡಿದ್ದೇನೆ. ಅಂತೆಯೇ, ಯಾವುದನ್ನೂ ಸ್ವಾರ್ಥಕ್ಕಾಗಿ ಚಿಂತಿಸದ ಅವರ ನಡೆಯನ್ನೂ, ಸಂಘಟನಾ ಶಕ್ತಿಯನ್ನೂ ಕಂಡು ಬೆರಗಾಗಿದ್ದೇನೆ.
2014ರಲ್ಲಿ ನಾ ಮೈಸೂರು ಬಿಟ್ಟ ಮೇಲೆ, ಶ್ರೀವತ್ಸ ಅವರನ್ನು ಸಂಪರ್ಕಿಸಿಲ್ಲ. ಅವರು ಮೈಸೂರಿನ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ವಹಿಸಿದ್ದು, ನಂತರ ಕೃಷ್ಣರಾಜ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿರುವುದು ನನಗೆ ಸಂತಸದ ವಿಷಯಗಳಾಗಿವೆ.
ನಾವು ಸಮಾಜದಲ್ಲಿ ಸಕ್ರಿಯರಾಗಿರುವವರಿಗೆ, ಅವರ ಕಾರ್ಯದಲ್ಲಿ ಎಂದೂ ಜೊತೆಗೂಡಿ ಕೆಲಸ ಮಾಡದೆ, ಅವರು ಗೆದ್ದಾಗ ನಮ್ಮವರು ಎಂದು ಹೇಳಿಕೊಳ್ಳುವುದು ಸಂಕೋಚದ ವಿಷಯ. ಆದರೆ, ಶ್ರೀವತ್ಸ ಅವರು ನನ್ನ ಆತ್ಮಿಯ ಗೆಳೆಯನಾಗಿ ಮತ್ತು ಸಾಮಾಜಿಕ ಹಿತಚಿಂತಕರಾಗಿ ಸದಾ ಹೃದಯಕ್ಕೆ ಹತ್ತಿರವಾದವರು. ನಾನವರ ಅಭಿಮಾನಿ.
ಆತ್ಮೀಯ ಶ್ರೀವತ್ಸ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday T S Srivatsa Bjp
ಕಾಮೆಂಟ್‌ಗಳು