ತಿರುಪ್ಪಾವೈ11
ತಿರುಪ್ಪಾವೈ
ಭಕ್ತವೃಂದ ನಿನ್ನ ಮನೆಯ ಬಳಿ ಕಾದು ನಿಂತಿದೆ
Thiruppavai 11
ಕಟ್ರುಕ್ಕರವೈಕ್ಯನ್ಗಳ್ ಪಲಕರನ್ದು
ಶೆಟ್ರಾರ್ ತಿರಲಳೆಯಚ್ಚೆನ್ರು ಶೆರುಚ್ಚೆಯುಂ
ಕುಟ್ರ ಮೊನ್ನ್ರಿಲ್ಲಾದ ಕೋವಲರ್‌ತಂ ಪೊರ್ಕೊಡಿಯೇ
ಪುಟ್ರರವಲ್ ಗುಲ್ ಪುನಮಯಿಲೇ ಪೋದರಾಯ್
ಶುಟ್ರತ್ತು ತೋಳ್‍ಮಾರೆಲ್ಲಾರುಂ ವಂದು ನಿನ್
ಮುಟ್ರಂ ಪುಗುನ್ದು ಮುಗಿಲ್ ವಣ್ಣನ್ ಪೇರ್ ಪಾಡ
ಶಿಟ್ರಾದೇ ಪೇಶಾದೇ ಶೆಲ್ವಪ್ಟೆಂಡಾಟ್ಟಿ ನೀ ಎಟ್ರುಕ್ಕುರಂಗುಂ ಪೋರುಳೇಲೋರೆಂಬಾವಾಯ್
ಭಾವಾನುವಾದ
ಕೇಸರಿಯ ಕೆಣಕಿ ಸೆಣಸುವರು ಗೋಕುಲದ ಗೋವಳರು
ನೀನೀ ಕುಲಕೆ ರತ್ನಮಯ ಕೀರೀಟಿ ಪ್ರಭಾಪೂರ್ಣೇಂದು ಗಿರಿಧರನೊಲುಮೆಯಾ ಸಖಿ ಹೊನ್ನವಿಲ ಕೇಶರಾಶಿನಿ ನೀ
ವಾಸುದೇವನನು ದೇವಕೀ ಕಂದನನು ಸ್ತುತಿಸಿಹರು ಸುರರೆಲ್ಲ
ಪದುಮನಾಭನ ಗುಣಗಾನ ಸಾಗರದಿ ನಿನ್ನನೀ ಮರೆತಿಹೆಯಾ?
ನಮಗರುಹು ನಿನ್ನ ಭಕ್ತಿಯ ಪರಿ, ಜೀವ ಭಾವವನು ಜೀವಜೀವನಲಿ ಲೀನವಾಗಿಸಲೆಮ್ಮನೋಂಪಿಗೆ ನೆರವಾಗು ತಾಳಲಾಗದು ವಿರಹ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲೆಡೆ ಮಂಗಳದ
ಮುಂಬೆಳಕು
ತಿರುಪ್ಪಾವೈ ಗೀತ ಮಾಲೆ
ಪಾಶುರ - 11
ಸಂಕ್ಷಿಪ್ತ ಭಾವಾರ್ಥ
ಗೋದೆ ಶ್ರೀಕೃಷ್ಣನ ಮತ್ತೊಬ್ಬ ಆಪ್ತಸಖಿಯನ್ನು ಎಬ್ಬಿಸುತ್ತಿದ್ದಾಳೆ ಈ ಪಾಶುರದಲ್ಲಿ. ಈ ಸಖಿಯು ಶ್ರೀಕೃಷ್ಣನನ್ನು ತನ್ನ ಭಕ್ತಿ ಬಂಧನದಲ್ಲಿ ಸದಾಕಾಲ ಹಿಡಿದಿಟ್ಟುಕೊಂಡಿರುವವಳು.
ನೋಡಮ್ಮ ಭಕ್ತವೃಂದ ಅಧಿಕ ಸಂಖ್ಯೆಯಲ್ಲಿ ನಿನ್ನ ಮನೆಯ ಬಳಿ ಬಂದು ಕಾದಿದೆ. ಪರಮಪುರುಷನ ದರ್ಶನವನ್ನು ಮಾಡಿಸುವುದರ ಮೂಲಕ ತಮ್ಮನ್ನು ಧನ್ಯರಾಗಿಸಬೇಕೆಂದು ಪ್ರಾರ್ಥಿಸಿ ಕಾದು ನಿಂತಿದೆ. ಶ್ರೀನಿಧಿಯನ್ನು ಪಾಡಿ ಪೊಗಳಿದರೂ ನೀನು ಮಾತ್ರ ಯಾವುದೇ ರೀತಿಯಲ್ಲೂ ಚಲಿಸದೇ ಅಚಲಳಾಗಿ ಯೋಗನಿದ್ರೆಯಲ್ಲಿರುವಂತಿದೆಯಲ್ಲ ? ಅಥವಾ ಭಕ್ತರ ಗಾನಾಮೃತದಲ್ಲಿ ಮನಮರೆತು ನಿನ್ನನ್ನೇ ನೀನು ಮರೆತಿದ್ದೀಯೋ ?
ಆದರೆ ಓ ಗೆಳತಿ, ನೀನು ಹಾಗೆ ಮಾಡದೆ ನಮ್ಮೆಲ್ಲರನ್ನೂ ಕೈಹಿಡಿದು ನಡೆಸಿ ಹರಿಭಕ್ತಿಯ ಪರಿಮಳದಲ್ಲಿ ಮೀಯಿಸಿ ಈ ಜೀವನನ್ನು ಜೀವಜೀವನಲ್ಲಿ ಲೀನವಾಗಿಸಲು ದಾರಿ ತೋರಿಸು.
ನಿದ್ರೆಯ ನಟನೆ ಸಾಕು. ಅದಾವ ಕಾರಣದಿಂದಲೋ ಏನೊ ಇಹಲೋಕದಲ್ಲಿ ಜನಿಸಿ ಬಂದಿದ್ದೇವೆ. ಬಂದುದಕ್ಕೆ ಜನನ ಮರಣಗಳ ಹಿಡಿತದಿಂದ ನಮ್ಮನ್ನು ಪಾರುಗಾಣಿಸಿ, ಮುಕ್ತಿಮಾರ್ಗವನ್ನು ತೋರಿಸು ಎಂದು ಪ್ರಾರ್ಥಿಸೋಣ.
ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತಲೋಕಕ್ಕೂ ಮಂಗಳ ಉಂಟಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
Art credits: Keshav (©KrishnaforToday)
ಕಾಮೆಂಟ್‌ಗಳು