ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮನಮೋಹನ ಸಿಂಗ್



 ಡಾ. ಮನಮೋಹನ್ ಸಿಂಗ್ ನಮನ

ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರ ಸಂಸ್ಮರಣೆ ದಿನವಿದು. 

ಮನಮೋಹನ್ ಸಿಂಗ್ ಅವರು ಜನಿಸಿದ್ದು 1932ರ ಸೆಪ್ಟೆಂಬರ್ 26ರಂದು.   ಇವರು ಕಷ್ಟಪಟ್ಟು ಮೇಲೆ ಬಂದ ಅಪ್ರತಿಮ ಪ್ರತಿಭಾವಂತ, ಆಕ್ಸ್ ವರ್ಡ್ ವಿಶ್ವವಿದ್ಯಾಲಯದ ಡಾಕ್ಟರೇಟ್  ಪಡೆದಾತ, ವಿಶ್ವಸಂಸ್ಥೆಯಲ್ಲಿ ಉದ್ಯೋಗ ಮಾಡಿದಾತ, ಅರ್ಥಶಾಸ್ತ್ರಜ್ಞ, ಸಲಹೆಗಾರ, ಯೋಜನಾ ಆಯೋಗದ ಉಪಾಧ್ಯಾಕ್ಷ, ರಿಸರ್ವ್ ಬ್ಯಾಂಕ್ ಮುಖ್ಯಸ್ಥ,  ದೇಶವನ್ನು ಲೈಸೆನ್ಸ್ ರಾಜ್ ಮುಷ್ಠಿಯಿಂದ ಬಿಡುಗಡೆಯ ಹಾದಿಗೆ ತಂದ ಧೀಮಂತ ಹಣಕಾಸು ಮಂತ್ರಿ, ಜವಹರಲಾಲ್ ನೆಹರೂ ನಂತರ ಐದು ವರ್ಷ ಅವಧಿ ಪೂರೈಸಿ ಮತ್ತೊಂದು ಅವಧಿಗೆ ಪ್ರಧಾನಿಯಾದ ಕೀರ್ತಿ ಇವೆಲ್ಲವೂ ಡಾ. ಮನಮೋಹನ್ ಸಿಂಗ್ ಅವರ ಹೆಗ್ಗಳಿಕೆಯಲ್ಲಿವೆ.  

ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಮೂಡಿದ್ದ ಅನೇಕ ಅವ್ಯವಸ್ಥೆ ಹಾಗೂ ಭ್ರಷ್ಟತೆಗಳ ನಡುವೆಯೂ, ಯಾರೂ ಅವರ ಪ್ರಾಮಾಣಿಕತೆಯನ್ನು ಸಂದೇಹಿಸದೆ ಇದ್ದಂತಹ ವ್ಯಕ್ತಿತ್ವ ಅವರದಾಗಿತ್ತು.  ಅವರು ಹೆಚ್ಚು ಮೌನಿಯಾಗಿದ್ದವರು.  ಭಾರತದಲ್ಲಿ ಅತೀ ಕಡಿಮೆ ನಿದ್ದೆ ಮಾಡುವ ವ್ಯಕ್ತಿಯೆಂದರೆ ಪ್ರಧಾನ ಮಂತ್ರಿ ಎಂಬ ಮಾತು ಮೊದಲಿನಿಂದಲೂ ಜನಜನಿತ.  ಈ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಅವರ  ಶ್ರಮ ವಂದನಾರ್ಹವಾದುದು. 

ಡಾ. ಮನಮೋಹನ್ ಸಿಂಗ್ 2024 ವರ್ಷದ ಡಿಸೆಂಬರ್ 26ರಂದು ಈ ಲೋಕವನ್ನಗಲಿದರು. 

our former Prime Minister Dr Man Mohan Singh 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ