ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ12


 ತಿರುಪ್ಪಾವೈ

ಹಾಲಿನ ಹೊಳೆ ಉಕ್ಕಿ ಹರಿದು 
ನಿಲ್ಲಲೂ ಎಡೆಯಿಲ್ಲದಾಗಿದೆ
Thiruppavai 12

ಕನ್ನೆತ್ತಿಳಂ ಕಟ್ರೆರುಮೈ ಕನ್ರುಕ್ಕಿರಂಗಿ
ನಿನೈತ್ ಮುಲೈವಳಿಯೇ ನಿನ್ರುಪಾಲ್‌ಶೋರ 
ನನೈತಿಲ್ಲಂ ಶೇರಾರ್ಕುಂನರಚೆಲ್ವನ್ ತಂಗಾಯ್ 
ಪನಿತ್ತಲೈವೀಳಿನಿನ್ ವಾಶಳ್ ಕಡೈಪತ್ತಿ ಶಿನತ್ತನಾಲ್ ತೆನ್ನಿಲಂಗೈಕ್ಕೋಮಾನೈಚೆಟ್ರ ಮನತ್ಕುಕ್ಕಿನಿಯಾನೆಯ್ ಪ್ಪಾಡವುಂ ನೀವಾಯ್ ತಿರವಾಯ್ 
ಇನಿತ್ತಾನ್ ಎಳುಂದಿರಾಯ್ ಈದೆನ್ನಪೇರುರಕ್ಕಂ
ಅನೈತಿಲ್ಲತ್ತಾರುಂ ಅರಿನ್ದೇಲೋರೆಂಬಾವಾಯ್

ಭಾವಾನುವಾದ

ಮಹಿಷಿಗಳ ಕ್ಷೀರಧಾರೆ ತಾ ಹರಿದು 
ತಾಯ್ಕೆಲದಿ ಕೆಸರೇ ಕೆಸರು ಎಲ್ಲೆಲ್ಲು 
ನಿಲ್ಲಲೆಡೆಯಿಲ್ಲ ತೆರವಿಲ್ಲ ನಿನ್ನೆಡೆಗೆ ಬರಲೆಮಗೆ ಓ ಸಖಿಯೇ 
ಮುಸುಕಿದೀ ಮಂಜಿನಲಿ ಕಾಣದಾಗಿದೆ ಸರಿದಾರಿ ನಿನ್ನರಮನೆಗೆ ಶ್ರೀಧಾಮನೊಲುಮೆಯಾ ಸೋದರಿ ನೀನಂತರಂಗ ಭಕ್ತಳು ಭಾನುಕುಲೇಶನಿಗೆ 
ದಶಕಂಠಮರ್ಧನ ಸೀತಾರಮಣನನು ನುತಿಸುತಿಹೆವೆಚ್ಚರಾಗಮ್ಮ ಸಿರಿಮದವೆಂದತಿಶಯದಿ ನೆನೆವ ಮುನ್ನವೇ ಬಂದೆಮಗೆ ನೆರವಾಗು ತೋರೆಮಗೆ ಜಗತ್ತೇತುವಿನ ಚರಣ ನಿನ್ನನುಪಮ ಭಕುತಿ ಬೆಳಕಲ್ಲಿ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು

ತಿರುಪ್ಪಾವೈ 12 
ಸಂಕ್ಷಿಪ್ತ ಭಾವಾರ್ಥ

ಈ ಪಾಶುರದಲ್ಲಿ ಎಬ್ಬಿಸಲ್ಪಡುವ ಸಖಿಯು ಶ್ರೀಕೃಷ್ಣನ ಪರಮಾಪ್ತ ಸಖಿಯರಲ್ಲಿ ಮತ್ತೊಬ್ಬ ಅಗ್ರಗಣ್ಯಳು. ಅಲ್ಲದೇ ಶ್ರೀಧಾಮನೆಂಬ ಐಶ್ವರ್ಯವಂತನ ಸೋದರಿ. ಹೀಗಾಗಿ ಈಕೆಯನ್ನು ಮುಂದಿಟ್ಟುಕೊಂಡು ಹೋದರೆ ಶ್ರೀಕೃಷ್ಣನು ಸುಲಭವಾಗಿ ಒಲಿಯುತ್ತಾನೆ. ಭಕ್ತಾಗ್ರಣಿಗಳಿಲ್ಲದ ವ್ರತವು ವ್ಯರ್ಥ ಎಂದು ಈ ಸಖಿಯನ್ನು ಎಬ್ಬಿಸುತ್ತಿದ್ದಾಳೆ.

ಓ ಸಖಿ, ಇಲ್ಲಿ ಹಾಲಿನ ಹೊಳೆ ಹರಿದು ನಿಲ್ಲಲೂ ಎಡೆಯಿಲ್ಲದಾಗಿದೆ ಅಧಿಕವಾಗಿ ಹಾಲು ಕರೆಯುವ ಎಮ್ಮೆಗಳಿಂದ ಕೂಡಿರುವ ನನ್ನ ತಾಯ್ನಾಡಿನಲ್ಲಿನ ವೇದಾಂತ ಸಂಗ್ರಹ ಕೆಚ್ಚಲುಗಳಿಂದ ಹಾಲು ಸಮೃದ್ಧವಾಗಿ ಹರಿದು ಧಾರಕಾರವಾಗಿ ಹರಿದು ಬರುತ್ತಿದೆ. ಅಂದರೆ ತನ್ನ ತಾಯ್ನಾಡಾದ ಈ ಭಾರತದಲ್ಲಿ ವೇದಾಂತಿಗಳು ಅಧಿಕರಾಗಿ ವೇದವೇದಗಳ ಬಗ್ಗೆ ವಿಪುಲವಾದ ಚರ್ಚೆಗಳು ನಡೆದು ಪರಮಪದವನ್ನು ಸೇರಲು ಯಾವ ದಾರಿ ಸುಲಭ? ಎಂಬುವ ಬಗ್ಗೆ ಏನನ್ನೂ ಅರಿಯದಂತಹ ಪರಿಸ್ಥಿತಿ ಬಂದೊದಗಿದೆ. ಜೊತೆಗೆ ಚಳಿಗಾಳಿ, ಮಂಜೂ ಸಹ ಸುರಿಯುತ್ತಿದೆ. ಒಟ್ಟಾರೆ ಸರಿದಾರಿಯೇ ಕಾಣುತ್ತಿಲ್ಲ. ಎಲ್ಲವೂ ಅಯೋಮಯವಾಗಿದೆ.

ಓ ಸಖಿ, ನಾವು ಅನಂತಪದ್ಮನಾಭನನ್ನು ವಿವಿಧ ಅವತಾರಗಳ ವರ್ಣನೆ ಮಾಡಿ ಪಾಡುತ್ತಿದ್ದರೂ ಸಹ ನಿನಗೆ ಎಚ್ಚರವಾಗಲಿಲ್ಲವೆ? ನೋಡು. ಗೆಳತಿಯರೆಲ್ಲಾ ಆಗಲೇ ಬೇಸರಿಸುತ್ತಿದ್ದಾರೆ. ನಿನಗೆ ಶ್ರೀಕೃಷ್ಣನಲ್ಲಿ ಅಧಿಕ ಪ್ರೇಮ ಎಂಬ ಮದ ಜಾಸ್ತಿಯಾಗಿದೆ ಎಂದು ಅವರು ಮೂದಲಿಸುವ ಮುನ್ನವೇ ಅದಕ್ಕೆ ಅವಕಾಶವೀಯದಂತೆ ಇನುತ್ತಾನ್ ಎಳುಂದಿರಾಯ್, ಇನ್ನು ಮೇಲಾದರೂ ಎದ್ದು ಬಾ ನಮ್ಮನ್ನೂ ಸಹ ನಿನ್ನಂತೆ ಭಕ್ತಿ ಸಾಗರದಲ್ಲಿ ಮುಳುಗಿ ಜನ್ಮಸಾಫಲ್ಯ ಪಡೆಯುವಂತೆ ಮಾಡು.
ಸಂಸಾರ ಸಾಗರವನ್ನು ದಾಟಲು ಸೇತುವೆಯಂತಿರುವ ಆ ಜಗನ್ಮಂಗಳ ಮೂರ್ತಿಯನ್ನು ಸ್ತುತಿಸುವ ಪರಿಯನ್ನು ತಿಳಿಸು. ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತಲೋಕಕ್ಕೂ ಕಲ್ಯಾಣ ಉಂಟಾಗಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ

Art credits: Keshav (©KrishnaforToday)


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ