ಲಕ್ಷ್ಮೀ ಮಚ್ಚಿನ
ಲಕ್ಷ್ಮೀ ಮಚ್ಚಿನ
ಲಕ್ಷ್ಮೀ ಮಚ್ಚಿನ ಅವರು ಪತ್ರಕರ್ತರಾಗಿ, ಬರಹಗಾರರಾಗಿ, ಸಾಕ್ಷ್ಯಚಿತ್ರ ನಿರ್ಮಾಪಕರಾಗಿ, ಹೀಗೆ ಬಹುಮುಖಿಯಾಗಿ ಹೆಸರಾಗಿದ್ದಾರೆ.
ಡಿಸೆಂಬರ್ 23, ಲಕ್ಷ್ಮೀ ಮಚ್ಚಿನ ಅವರ ಜನ್ಮದಿನ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಉಡುಪಿ, ಪುತ್ತೂರುಗಳಲ್ಲಿ ವ್ಯಾಸಂಗ ನಡೆಸಿದರು. ಪ್ರಸ್ತುತ ಅವರು ಉಡುಪಿ ನಿವಾಸಿ.
ಇಪ್ಪತ್ತರ ಹರೆಯದಲ್ಲೇ ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತರಾಗಿ ತೊಡಗಿಕೊಂಡ ಲಕ್ಷ್ಮೀ ಮಚ್ಚಿನ ಅವರು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರರಾಗಿ ಸೇರಿದರು. ಅಲ್ಲಿ ಹಿರಿಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, 2018ರಿಂದ ಉಪಮುಖ್ಯ ವರದಿಗಾರರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತ ಬಂದಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಇವರಿಗೆ ವಿಶೇಷ ಆಸಕ್ತಿ. ಈ ನಿಟ್ಟಿನಲ್ಲಿ ಅವರು ಮಾಡಿದ ವರದಿಗಳು ಸಹಸ್ರಾರು.
ಲಕ್ಷ್ಮೀ ಮಚ್ಚಿನ ಅವರಿಗೆ ಕಥಾ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ, ಪತ್ರಿಕೋದ್ಯಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗಳು ಸಂದಿವೆ. ಮಂಗಳೂರು ಆಕಾಶವಾಣಿಯಲ್ಲಿ ತುಳು ಭಾಷಣ, ರೂಪಕ, ನಾಟಕ ಪ್ರಸಾರವಾಗಿದ್ದು, ಧರ್ಮಸ್ಥಳದ ಸ್ವಚ್ಛತೆ ಕುರಿತು ಮಾಡಿದ ರೂಪಕ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಲ್ಲಿ ಪ್ರಸಾರವಾಗಿದೆ. ಮಕ್ಕಳ ನಾಟಕ ಚಂದನ ವಾಹಿನಿಯಲ್ಲಿ ಪ್ರಸಾರವಾಗಿದೆ. ಶ್ರೀ ಶಂಕರ ವಾಹಿನಿಗಾಗಿ ಒಡಿಯೂರು ಕ್ಷೇತ್ರದ ಕುರಿತು 10 ಕಂತುಗಳ ಸಾಕ್ಷ್ಯ ಚಿತ್ರ ರಚಿಸಿ, ನಿರ್ದೇಶಿಸಿದ್ದಾರೆ. ಕುಂದಾಪುರ ಪುರಸಭೆಯ ತ್ಯಾಜ್ಯ ವಿಲೇವಾರಿ ಕುರಿತು ಸಾಕ್ಷ್ಯಚಿತ್ರ ನಿರ್ದೇಶಿಸಿದ್ದಾರೆ.
ಲಕ್ಷ್ಮೀ ಮಚ್ಚಿನ ಅವರ ಪ್ರಕಟಿತ ಕೃತಿಗಳಲ್ಲಿ ಯುಗಪ್ರವರ್ತಕ, ಹೊಸಬೆಳಕು, ಅಂಡಮಾನ್ ಅಂಡಮಾನ್, ರಸಮಯ ಸಾವಯವ, ನಮ್ಮ ಪ್ರಧಾನ ಮಂತ್ರಿಗಳು, ಶಾಂತಿವನದ ನಡಿಗೆ ಗಿನ್ನಿಸ್‌ನೆಡೆಗೆ, ನಕ್ಸಲ್ ನೆತ್ತರ ಹಾದಿಯಲ್ಲಿ, ೨೦೧೬ರ ನೊಬೆಲ್ ಪ್ರಶಸ್ತಿ ಪುರಸ್ಕೃತರು; ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ, ಕಾರ್ಕಳ, ಬಾರಕೂರು ಮುಂತಾದ ಸ್ಥಳ ಪರಿಚಯಗಳು; ನೋಬೆಲ್ ಪುರಸ್ಕೃತರು, ನಮೋ ಮಂಜುನಾಥ, ರಂಗಾಂತರಂಗ, ಅಂಡಮಾನ್ ಅಂಡಮಾನ್, ಪ.ರಾಮಕೃಷ್ಣ ಶಾಸ್ತ್ರಿ ಬದುಕು ಬರಹ ಬವಣೆ, ಮರಳಿ ಪ್ರಕೃತಿಗೆ ಮುಂತಾದವು ಸೇರಿವೆ.
ಲಕ್ಷ್ಮೀ ಮಚ್ಚಿನ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Laxmi Machinable🌷🌷🌷
ಕಾಮೆಂಟ್‌ಗಳು