ಎಸ್.ಜಿ. ಮೈಸೂರುಮಠ
ಎಸ್. ಜಿ. ಮೈಸೂರುಮಠ
ಎಸ್. ಜಿ. ಮೈಸೂರುಮಠ ಕನ್ನಡ ಮತ್ತು ಇಂಗ್ಲಿಷ್ ಭಾಷಾಪತ್ರಿಕೋದ್ಯಮದಲ್ಲಿ ಐದು ದಶಕಗಳ ಅವಿಶ್ರಾಂತವಾಗಿ ದುಡಿದವರು. ಅವರು ರಂಗಭೂಮಿ ಮತ್ತು ಚಲನಚಿತ್ರಗಳಲ್ಲೂ ಕ್ರಿಯಾಶೀಲರಾಗಿದ್ದರು.
ಶಿರಾಳಕೊಪ್ಪ ಗುರುಬಸವಯ್ಯ ಮೈಸೂರುಮಠ ಅವರು 1925ರಲ್ಲಿ ದಾವಣಗೆರೆಯಲ್ಲಿ ಜನಿಸಿದರು. ತಂದೆ ಗುರು ಬಸವಯ್ಯ. ತಾಯಿ ಚೆನ್ನವೀರಮ್ಮ. ವಿದ್ಯಾಭ್ಯಾಸ ಶಿರಾಳಕೊಪ್ಪ, ಶಿವಮೊಗ್ಗ, ದಾವಣಗೆರೆ, ಬಿಜಾಪುರ ಮತ್ತು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನಡೆಯಿತು. ಇವರು ಇಂಗ್ಲಿಷ್ ಎಂ.ಎ ಓದುವ ವೇಳೆಗೆ ಕರ್ನಾಟಕ ಕಾಲೇಜು, ವಿಶ್ವವಿದ್ಯಾನಿಲಯವಾಯಿತು
ಮುಂದೆ ಲಂಡನ್ನಿನ ಥಾಮ್ಸನ್ ಫೌಂಡೇಶನ್ನಿನಲ್ಲಿ ಪತ್ರಿಕೋದ್ಯಮದಲ್ಲಿ ತರಬೇತಿ ಪಡೆದರು,
ಮೈಸೂರುಮಠ ಅವರು ಮೊದಲಿಗೆ ಹುಬ್ಬಳ್ಳಿಯ ವಿಶಾಲಕರ್ನಾಟಕ, ದೈನಿಕ ಪ್ರಪಂಚ ವಾರಪತ್ರಿಕೆ, ಜಯಕರ್ನಾಟಕ ಮಾಸ ಪತ್ರಿಕೆಗಳಲ್ಲಿ ದುಡಿದರು. ಅನಂತರ ಬೆಂಗಳೂರಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪ್ರಧಾನ ವರದಿಗಾರರಾಗಿ 25 ವರ್ಷಗಳ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರ 'ಅಮೃತ ಬಜಾರ್' ಪತ್ರಿಕೆಯ ವಿಶೇಷ ಬಾತ್ಮಿದಾರರಾದರು. ಸಂಯುಕ್ತ ಕರ್ನಾಟಕದ 'ಅಂತರ-ಅನಂತರ' ಅಂಕಣಕಾರರಾದರು. ಮಕ್ಕಳಿಗಾಗಿ ಬರೆದ 'ದಲಿತಮಾಮರ' ಒಂದು ಉಪಯುಕ್ತ ರಚನೆ ಎನಿಸಿತ್ತು. ಅವರ ಇತರ ಪ್ರಕಟಣೆಗಳಲ್ಲಿ ಹಣ್ಣಿನ ಕುಯಿಲು, ಶಿವನ ಡಂಗುರ ಸೇರಿವೆ. ಶಿವನ ಡಂಗುರಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. 'ಮನೆಯೊಡೆಯನಿದ್ದಾನೊ' ಎಂಬ ಅವರ ಅಂಕಣ ಬರೆಹಗಳ ಸಂಗ್ರಹ ಅವರ ಮರಣೋತ್ತರವಾಗಿ ಪ್ರಕಟಣೆಗೊಂಡಿತು.
ಮೈಸೂರುಮಠ ಅವರದು ಬಹುಮುಖ ಪ್ರತಿಭೆ. ಅವರು ರಂಗಭೂಮಿಯ ಕಲಾವಿದರೂ ಆಗಿದ್ದರು. ಹಂಸಗೀತೆ, ಕರಾವಳಿ, ಸದಾನಂದ ಮುಂತಾದ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸೆನೆಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದರು. ಕರ್ನಾಟಕ ಮುಖ್ಯಮಂತ್ರಿಗಳಾದ ವೀರಪ್ಪಮೊಯಲಿ ಅವರ ಪತ್ರಿಕಾ ಕಾರ್ಯದರ್ಶಿಯಾಗಿ ಮತ್ತು ಪತ್ರಿಕಾ ಅಕಾಡೆಮಿ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದರು. ಅವರು2000 ಸಾಲಿನ ಟಿಯೆಸ್ಸಾರ್ ಪ್ರಶಸ್ತಿಗೆ ಭಾಜನರಾಗಿದ್ದರು.
ಮೈಸೂರುಮಠ 2005ರ ಡಿಸೆಂಬರ್ 8ರಂದು ನಿಧನರಾದರು.
ಚಿತ್ರ:. ಮೈಸೂರುಮಠ ಅವರು 'ಹಂಸಗೀತೆ'ಚಿತ್ರದಲ್ಲಿನ ಪಾತ್ರದಲ್ಲಿ
On Remembrance Day of great journalist, writer and actor S. G. Mysoremutt
ಕಾಮೆಂಟ್‌ಗಳು