ತಿರುಪ್ಪಾವೈ22
ತಿರುಪ್ಪಾವೈ
ವಿದುರನಿತ್ತ ಹಾಲನ್ನು ಕುಡಿದು, ಹಸ್ತಿನಾವತಿಯ ಬೀದಿ ಬೀದಿಗಳಲ್ಲಿ ನೀ ಹಾಲಿನ ಹೊಳೆಯನ್ನೇ ಹರಿಸಿದೆ
Thiruppavai 22
ಅಂಗಣ್ ಮಾಜ್ಞಾಲತ್ತರಶರಭಿಮಾನ ಭಂಗಮಾಯ್ ವಂದು ನಿನ್ ಪಳ್ಳಿಕಟ್ಟಿಲ್‌ಕೀಳ್
ಶಂಗಮಿರಪಾರ್ ಪೋಲ್‌ವನ್ದು
ತಲೈಪ್ಪೆಯ್ದೋಂ
ಕಿಂಕಿಣಿವಾಯ್‍ಚ್ಚೆಯ್ದ
ತಾಮರೈಪೂಪ್ಪೋಲೇ ಶೆಂಗಣ್‍ಶಿರುಚ್ಚೆರಿದೆ ಯೆಮ್ಮೇಲ್ ವಿಳಿಯಾವೋ
ತಿಂಗಳುಮಾದಿತ್ತಿಯನುಂ ಎಳುನ್ದಾರ್‌ಪೋಲ್
ಅಂಗಣಿರಂಡುಂ ಕೊಣ್ಡೆಂಗಳಮೇಲ್ ನೋಕ್ಕುದಿಯೇಲ್
ಎಂಗಳಮೇಳ್ ಚ್ಚಾಪಮಿಳಿನ್ದೇಲೋರೆಂಬಾವಾಯ್
ಭಾವಾನುವಾದ - 22
ನಮಿಸಿ ನಿಂದಿಹರು ಸುರಗಣಾಧ್ಯಕ್ಷ ಸಹಿತ ತಾರಾಧಿಪರು ಶಿರಬಾಗಿ
ತುಂಬಿಹುದು ರತ್ನಕಾಂತಿ ಬೆಳಗಿ ದ್ವಾರಕಾನಾಥನರಮನೆಯು ಭಕ್ತಿಯಮುನೆಯೊಳ್ಮಿಂದು ಬಂದಿಹೆವು ಸರ್ವವಿದ್ಭಾನು ನಿನ್ನ ದರ್ಶನಕೆ
ಹರಿದು ಬರಲೀ ನಿನ್ನ ಕರುಣೆ ವಿದುರನಾಲಯದ ಕ್ಷೀರ ಧಾರೆಯಂತೆ ನೀನೆ ಗತಿ ನೀನೆ ಮತಿ ನೀನೇ ಸಕಲಕೆಲ್ಲಕು ಸನ್ಮಿತ್ರ ಆಧಾರಾಶ್ರಯನು ಕೋಟಿ ರವಿಕಾಂತಿ ನೇತ್ರ ಕಿಡಿತಾಕಿ ಸುಡಲೆಮ್ಮ ಮೋಹಮದ ಮಾತ್ಸರ್ಯ
ನೀಡಲೆಮಗಾಹ್ಲಾದ ನಿನ್ನ ಶಶಿಕೋಟಿ ಸಮ ನೇತ್ರ ಶ್ರೀರಂಗರಂಗ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲೆಡೆ ಮಂಗಳದ
ಮುಂಬೆಳಕು
ತಿರುಪ್ಪಾವೈ 22
ಸಂಕ್ಷಿಪ್ತ ಭಾವಾರ್ಥ
ನೋಡು ನಿನ್ನ ದರ್ಶನಕ್ಕೆ ಅನಂತಕೋಟಿ ದ್ವೀಪಗಳಿಂದ ಭೂಮಂಡಲಾಧಿಪರು ಬಂದಿದ್ದಾರೆ. ದೇವಗಣದೊಂದಿಗೆ ಇಂದ್ರನೂ ಸಹ ಕಪ್ಪಕಾಣಿಕೆಗಳನ್ನು ತಂದಿದ್ದಾನೆ. ಇವರ ಕಿರೀಟಗಳಿಂದ ಹೊರಹೊಮ್ಮುತ್ತಿರುವ ಪ್ರಭೆಯಿಂದ ಅರಮನೆಯಲ್ಲಿ ಕೋಟಿ ಸೂರ್ಯರು ಏಕ ಕಾಲದಲ್ಲಿ ಬೆಳಗಿದಂತೆ ಪ್ರಕಾಶಮಾನವಾಗಿದೆ.
ಹೇ ಮಾಧವ ಮಧುಸೂಧನ, ನೀನು ಭಕ್ತರಿಗೆ ಭಕ್ತ. ಅಂದೊಮ್ಮೆ ನೀನು ವಿದುರನ ಮನೆಗೆ ಹೋದಾಗ ವಿದುರ ನಿನ್ನ ಭಕ್ತಿಯಲ್ಲಿ ಮುಳುಗಿ ಬಾಳೆಹಣ್ಣನ್ನು ಬಿಡಿಸಿ ಸಿಪ್ಪೆಯನ್ನೇ ನಿನಗೆ ಕೊಟ್ಟಾಗ ಆನಂದದಿಂದ ನೀನು ಆ ಸಿಪ್ಪೆಯನ್ನೇ ತಿಂದು ವಿದುರನಿತ್ತ ಹಾಲನ್ನು ಕುಡಿದು, ಹಸ್ತಿನಾವತಿಯ ಬೀದಿ ಬೀದಿಗಳಲ್ಲಿ ಹಾಲಿನ ಹೊಳೆಯನ್ನೇ ಹರಿಸಿ ನಿನ್ನ ಭಕ್ತ ಪರಾಕಾಷ್ಠೆಯನ್ನು ಮೆರೆದವನು.
ಅಂತೆಯೇ ನೀನಂದು ಹರಿಸಿದ ಕ್ಷೀರಧಾರೆಯಂತೆ ಇಂದು ನಿನ್ನ ಕರುಣೆಯ ಧಾರೆಯನ್ನು ನಮ್ಮಕಡೆ ಹರಿಸು. ನಾವುಗಳೆಲ್ಲಾ ಭಕ್ತಿ ಶ್ರದ್ಧೆಗಳಿಂದ ಕೂಡಿದವರಾಗಿ, ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಭಕ್ತಿಯಮುನೆಯಲ್ಲಿ ಮಿಂದು ನಿನ್ನ ದರ್ಶನಕ್ಕಾಗಿ ಬಂದಿದ್ದೇವೆ.
ಬದುಕೆಂಬ ಈ ಜೀವಜಗತ್ತಿನ ಮಹಾಸಾಗರವನ್ನು ದಾಟಿಸಿ ನಮ್ಮನ್ನು ಉದ್ಧರಿಸು.
ನಿನ್ನ ರವಿಕೋಟಿತೇಜದ ಕಣ್ಣುಗಳಿಂದ ಬರುವ ಪ್ರಭೆಯು ನಮ್ಮೆಲ್ಲ ಜನುಮಜನುಮಗಳ ಮೋಹಮದ ಮಾತ್ಸರ್ಯಗಳನ್ನು ದಹಿಸಲಿ. ಶಶಿಕೋಟಿ ತೇಜದ ಬೆಳಕಿನಿಂದ ನಮಗೆ ಆಹ್ಲಾದವನ್ನುಂಟುಮಾಡಲಿ.
ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತ ಲೋಕಕ್ಕೂ ಮಂಗಳವಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
Art credits: Keshav (©KrishnaforToday)
ಕಾಮೆಂಟ್‌ಗಳು