ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ29

 


ತಿರುಪ್ಪಾವೈ 29

ನಿನ್ನ ನೆರಳಿನಲ್ಲಿಯೇ ನಡೆವಂತೆ ಅನುಗ್ರಹಿಸು


ಶಿಟ್ರುಮ್  ಶಿರುಕಾಲೇ ವನ್ದುನ್ನೈ ಶೇವಿತ್ತು ಉನ್ 

ಪೋಟ್ರಾಮರೈ  ಅಡಿಯೇ ಪೋಟ್ರುಮ್  ಪೊರುಳ್ ಕೇಳಾಯ್ 

ಪೆಟ್ರುಮ್ ಮೇಯಿಟ್ರು ಉಣ್ಣುಮ್ ಕುಲತ್ತಿಲ್ ಪಿರಿಂದು ನೀ 

ಕುಟ್ರೆವಲಂಗಳೆೈ ಕೊಳ್ಳಾಮಲ್  ಪೋಗಾದು 

ಇಟ್ರೈ ಪರೈ ಕೊಳ್ವಾನ್  ನನ್‍ರು  ಕಾಣ್ ಗೋವಿಂದಾ  

ಎಟ್ರೈಕ್ಕುಂ  ಏಳೇಳು ಪಿರವಿಕ್ಕುಂ ಉನ್ ತ್ತನ್ನೋಡು 

ಉಟ್ರೂಮೆಯ್ಯಾವೊಮ್   ಉನಕ್ಕೇ ನಾಮಾಳ್‍ಶೈವೋಂ

ಮಟ್ರೈನಮ್  ಕಾಮಂಗಳ್ ಮಾಟ್ರೇಲೋರೆಂಬಾವಾಯ್


ಭಾವಾನುವಾದ - ೨೯


ಪದಪಂಕಜವ ಪಾಡಿಹೆವು ಭಕುತಿಯಲಿ ನೋಂಪಿಯನಾಚರಿಸಿ ಶ್ರೀಕರನೆ ಮಾರ್ಗಶಿರದುದಯದಲಿ ಶೃತಸಾಗರನೆ ಲೋಕತ್ರಯಾತ್ರನೆ

ಸ್ವೀಕರಿಸೆಮ್ಮ ಸೇವೆಗಳ ನಂದಗೋಪಾಲ ಬೃಹದ್ರೂಪ ಹೇ ಶ್ರೀನಿವಾಸ 

ಎಲ್ಲ ಜನುಮಗಳಲಿರಲೆಮಗೆ ನಿನ್ನ ಸೇವೆಯ ಭಾಗ್ಯ ನಿನ್ನೊಡನಾಟ ತಪ್ಪದಿದು 

ಕುಂತೀಸುತರಿಗೊಲಿದಂತೆ ಸಲಹೆಮ್ಮನನುನಯದಿ ಕ್ಷೀರಾಬ್ಧಿತನಯ ರಮಣ 

ವಿದುರಾಕ್ರೂರ ಸುಧಾಮರಿಗೊಲಿದಂತೆ ಸಲಹಯ್ಯ ಸರ್ವವಾಗೀಶ್ವರೇಶ್ವರನೆ ನೀನನಾಥ ಬಂಧು ಎಂಬಭಿದಾನವನು ಮರೆಯಬೇಡಯ್ಯ ಸಪ್ತಾದ್ರಿವಾಸ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತ್ತೆಲ್ಲಡೆ ಮಂಗಳದ ಮುಂಬೆಳಕು

ಭಾವಾರ್ಥ 29

ಗೋವಿಂದಾ, ಗೋಪಾಲ, ಶ್ರೀತುಳಸಿ ವನಮಾಲಿ, ನೀನು ನಮ್ಮೆಲ್ಲ ಬಯಕೆಗಳನ್ನೂ ಬಲ್ಲವನು. ನಮ್ಮಮುಗ್ದಾಂತಃಕರಣ ಸೇವೆಯನ್ನು ಸ್ವೀಕರಿಸು. ನಾವುಗಳು ಸದಾಕಾಲ ನಿನ್ನ ಸೇವೆಯಲ್ಲಿರುವಂತೆ ನಿನ್ನ ನೆರಳಿನಲ್ಲಿಯೇ ನಡೆಯುವಂತೆ ಅನುಗ್ರಹಿಸು. ನಿನ್ನ ಎಲ್ಲ ಲೋಕರಕ್ಷಣಾವತಾರಗಳಲ್ಲಿ ನಿನ್ನೊಡನೆ ನಾವೂ ಜನಿಸಿ ನಿನ್ನ ಧರ್ಮಸಂಸ್ಥಾಪನೆಯ ಕೆಲಸಗಳಲ್ಲಿ ಭಾಗಿಗಳಾಗುವಂತೆ ಅನುಗ್ರಹಿಸು.

ನಮ್ಮಿಂದ ದೂರ ಸರಿಯದಿರು, ಯತಿರಾಜವರದ, ಪಾಂಡುತನಯರಿಗೊಲಿದಂತೆ, ಕಿರೀಟಿಗೊಲಿದು ಪಾರ್ಥಸಾರಥಿಯಾದಂತೆ ನಮ್ಮ ಬಾಳ ರಥವನ್ನು ನಡೆಸಿಕೊಡು. ಕೃಷ್ಣೆಯಳಲನ್ನು ದೂರಮಾಡಿದ ಗೋವಿಂದನಾಗಿ ನಮ್ಮನ್ನು ಪೊರೆದು, ನೀನು ಅನಾಥ ಬಂಧು ಎಂಬ ನಿನ್ನ ಹೆಸರನ್ನು ಉಳಿಸಿಕೊಳ್ಳುವವನಾಗು.

ನಿನ್ನ ಕೃಪಾ ಕಟಾಕ್ಷದಿಂದ ನಮ್ಮವ್ರತವೂ ಈಡೇರಿ ಸಮಸ್ತಲೋಕಕ್ಕೂ ಮಂಗಳವಾಗಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ

Art credits: Keshav (©KrishnaforToday)



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ