ಭವ್ಯ
ಜನವರಿ 12, ಭವ್ಯ ಅವರ ಜನ್ಮದಿನ. ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಡಾ. ದೇವೋಭವ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಭವ್ಯ ಮಹಾನ್ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಪ್ರೇಮಪರ್ವ ಮೂಲಕ ನಾಯಕಿ ಆದರು.
ಭವ್ಯ ಅವರು ವಿಶೇಷವಾಗಿ ವಿಷ್ಣುವರ್ಧನ್ ಮತ್ತು ಶಂಕರನಾಗ್ ಅವರೊಂದಿಗೆ ಹಲವು ಪ್ರಸಿದ್ಧ ಚಿತ್ರಗಳಲ್ಲಿ ಉತ್ತಮ ಅಭಿನಯದೊಂದಿಗೆ ಹೆಸರಾದರು. ನೀ ಬರೆದ ಕಾದಂಬರಿ, ಕೃಷ್ಣ ನೀ ಬೇಗನೇ ಬಾರೋ, ಜನನಾಯಕ, ಕರುಣಾಮಯಿ, ಹೃದಯ ಹಾಡಿತು, ಸಾಂಗ್ಲಿಯಾನ, ತವರು ಮನೆ, ಹೃದಯ ಗೀತೆ, ಪ್ರಳಯಾಂತಕ, ಅವಳೇ ನನ್ನ ಹೆಂಡತಿ, ರಾವಣ ರಾಜ್ಯ, ಮತ್ತೆ ಹಾಡಿತು ಕೋಗಿಲೆ ಮುಂತಾದವು ಅವರ ಜನಪ್ರಿಯ ಚಿತ್ರಗಳಲ್ಲಿ ಸೇರಿವೆ. ಹೀಗೆ ಅವರು ಅಭಿನಯಿಸಿದ ಚಿತ್ರಗಳು ನೂರಕ್ಕೂ ಹೆಚ್ಚು. ಭವ್ಯ ಅವರು ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ ಚಿತ್ರಗಳೂ ಸೇರಿದಂತೆ ಕೆಲವೊಂದು ಪೋಷಕ ಪಾತ್ರಗಳು ಮತ್ತು 'ದುರ್ಗ' ಅಂತಹ ಕಿರುತೆರೆಯ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಅವರು ಕೆಲವೊಂದು ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ.
ಭವ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of our lovely actress Bhavya 🌷🌷🌷
ಕಾಮೆಂಟ್‌ಗಳು