ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಶ್ವಿನಿ ರಾವ್ ದೇಶಮುಖ


ಅಶ್ವಿನಿ ರಾವ್ ದೇಶಮುಖ

ಆತ್ಮೀಯರಾದ ಅಶ್ವಿನಿ ರಾವ್ ದೇಶಮುಖ್ ಅವರು ಕಾನೂನು ತಜ್ಞರಾಗಿದ್ದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಡೆಸುತ್ತಿರುವುದರ ಜೊತೆಗೆ, ಸ್ತ್ರೀಪರ ಸಹಾನೂಭೂತಿ ಉಳ್ಳವರೂ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರೀತಿ ಉಳ್ಳವರೂ ಆಗಿದ್ದಾರೆ.

ಅಶ್ವಿನಿ ಅವರು ಅನೇಕ ಸ್ತ್ರೀ ಕಾರ್ಮಿಕರು, ಶೋಷಿತ ಸ್ತ್ರೀಯರು, ಅನಿವಾರ್ಯವಾಗಿ ಒಂಟಿ ಪೋಷಕರಾಗಿ ಬದುಕು ನಡೆಸಬೇಕಾದ ಸ್ತ್ರೀಯರು, ಮತ್ತು ಕಷ್ಟಜೀವಿಗಳ ಪರವಾದ ಸಂಘಟನೆಗಳಲ್ಲಿ ನೇರವಾಗಿ ಪಾಲ್ಗೊಳುತ್ತಿದ್ದವರು.  ಪ್ರಸಕ್ತದಲ್ಲಿಯೂ ಅಪಾರ ಸ್ತ್ರೀಪರ ಸಂವೇದನೆಗಳುಳ್ಳ ಅಶ್ವಿನಿ ಅವರು ಅವಶ್ಯವಿದ್ದೆಡೆಗಳಲ್ಲಿ ತಮ್ಮ ಸಲಹೆ ಬೆಂಬಲವನ್ನು ನಿರಂತರವಾಗಿ ನೀಡುತ್ತಿದ್ದಾರೆ. 

ಅಶ್ವಿನಿ ಅವರು ಬದುಕಲ್ಲಿ ಹಲವು ರೀತಿಯ ಕಷ್ಟಗಳನ್ನೆದುರಿಸಿ ನಿರಂತರ ಪರಿಶ್ರಮದಿಂದ ಬದುಕಿನಲ್ಲಿ ಸ್ವಾವಲಂಬನೆ ಸಾಧಿಸಿದವರು. ತಾವು ಸಾಧಿಸದ ಅನೇಕವನ್ನು ತಮ್ಮ ಮಗಳು ಸಾಧಿಸಬೇಕು ಎಂಬ ಕನಸು ಅವರಲ್ಲಿ ತುಂಬಿದೆ. 

ಬಾನಿ ಎಂಬ ಹೆಸರಲ್ಲಿ ಕವಿತೆ ಬರೆಯವ ಅಶ್ವಿನಿ ಅವರ ಈ ಮಾತುಗಳು ಬಹಳಷ್ಟು ಹೇಳುತ್ತವೆ:

 ವಯಸ್ಸಾಯಿತು ನನಗು

ನೆರೆಗೂದಲು ಮೆರಗೆನ್ನುವಷ್ಟು


ವಯಸ್ಸಾಯಿತು ನನಗು

ಈಡೇರದ ಕನಸ

ಹೆಗಲಿಂದ ಕೆಳಗಿಳಿಸಿ

ಒಮ್ಮೆ ನೋಡಿ ಕೊನೆಯ

ಸಲ,

ನನ್ನ ಮಗಳು ಕಾಣುತ್ತಿರುವ ಕನಸ

ಬೊಗಸೆಯಲಿ ಹಿಡಿದು

ಅದನ್ನು ಜೋಪಾನ

ಮಾಡುವಷ್ಟು


ವಯಸ್ಸಾಯಿತು ನನಗೂ

ಸಿಗದ ಏನಕ್ಕೂ 

ಹಪಾಹಪಿ ಪಡದಷ್ಟು

ಸಿಕ್ಕಿದ್ದನ್ನು ಅಪ್ಪುತ್ತಾ

ಎಲ್ಲವನ್ನೂ ಒಪ್ಪುತ್ತಾ, 

ಸಂಭ್ರಮಕ್ಕಿಂತ ಸಮಾಧಾನವಾಗಿ

ಮುಂದುವರೆಸಬೇಕೆನ್ನುವಷ್ಟು


ಕಡೆಗೂ ವಯಸ್ಸಾಯಿತು ನನಗೂ...


ಆತ್ಮೀಯರಾದ ಅಶ್ವಿನಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು

Happy birthday Ashwini Rao Deshmukh 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ