ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮೀನ್ ಸಯಾನಿ


 ಅಮೀನ್ ಸಯಾನಿ 


ಆಕಾಶವಾಣಿಯಲ್ಲಿ 'ಬಿನಾಕಾ ಗೀತಮಾಲ' ಕೇಳದವರು ನಮ್ಮ ಯುಗದಲ್ಲಿರಲಿಲ್ಲ. ಅದು ಜನಪ್ರಿಯವಾದುದಕ್ಕೆ ಆ ಕಾರ್ಯಕ್ರಮದಲ್ಲಿನ ಗೀತೆಗಳು ಎಷ್ಟು ಭವ್ಯವಾಗಿರುತ್ತಿದ್ದವೊ ಅದಕ್ಕಿಂತ ಭವ್ಯವಾಗಿದ್ದು ಆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅಮೀನ್ ಸಯಾನಿ ಅವರ ನಿರೂಪಣೆ.

ಅಮೀನ್ ಸಯಾನಿ 1932ರ ಡಿಸೆಂಬರ್ 21 ರಂದು ಮುಂಬೈನಲ್ಲಿ ಜನಿಸಿದರು. ಅಮೀನ್ ಸಯಾನಿ ಮುಂಬೈನ ಆಲ್ ಇಂಡಿಯಾ ರೇಡಿಯೊದಲ್ಲಿ ನಿರೂಪಕರಾಗಿ ಸೇವೆ ಪ್ರಾರಂಭಿಸಿದರು. 10 ವರ್ಷಗಳ ಕಾಲ ಅಲ್ಲಿ ಇಂಗ್ಲಿಷ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇದಾದ ನಂತರ ಭಾರತದಲ್ಲಿ ಆಲ್ ಇಂಡಿಯಾ ರೇಡಿಯೋವನ್ನು ಜನಪ್ರಿಯಗೊಳಿಸುವಲ್ಲಿ ಅವರು ನಿರ್ವಹಿಸಿದ  ಪಾತ್ರ ಮಹತ್ವದ್ದು. ಹಿಂದೆ ಅವರು ಹಲವು ವರ್ಷ ಟಾಟಾ ಸೋಪುಗಳ ಮಾರಾಟಗಾರನಾಗಿಯೂ ವೃತ್ತಿ ನಡೆಸಿದ್ದರು.   

1952ರಿಂದ  ರೇಡಿಯೋ ಸಿಲೋನಿನಲ್ಲಿ ಮೂಡುತ್ತಿದ್ದು, ಮುಂದೆ ಆಕಾಶವಾಣಿಯ ವಿವಿಧಭಾರತಿಗೆ ಬಂದ ‘ಬಿನಾಕಾ ಗೀತಮಾಲಾ’ (ನಂತರ ಸಿಬಾಕಾ ಗೀತಮಾಲಾ) ಕಾರ್ಯಕ್ರಮ ಸುಮಾರು ನಾಲ್ಕು ದಶಕಗಳ ಕಾಲ ಮುಂದುವರೆದಿದ್ದು ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಅದಕ್ಕೆ ವಿಶೇಷ ಕಾರಣ ಅದರ ನಿರೂಪಣೆಯನ್ನು ಆಕರ್ಷಕವಾಗಿ ನಿರೂಪಿಸುತ್ತಿದ್ದ ಅಮೀನ್ ಸಯಾನಿ.  ಸಿನಿಮಾಲೋಕದ 'ಸ್ಟಾರ್'‍ಗಳ ಕುರಿತು ಕಾರ್ಯಕ್ರಮ ನಿರೂಪಿಸುತ್ತಿದ್ದ ಅಮೀನ್ ಸಯಾನಿ ಅವರ ಕೀರ್ತಿ ಎಲ್ಲ 'ಸ್ಟಾರ್‍'ಗಿರಿಗಳನ್ನೂ ಮೀರಿಸುವ ಅಮರತ್ವದ್ದು. 

ಅಮೀನ್ ಸಯಾನಿ ಅವರು ಭೂತ್ ಬಾಂಗ್ಲಾ, ತೀನ್ ದೇವಿಯಾನ್, ಬಾಕ್ಸರ್ ಮುಂತಾದ ಚಲನಚಿತ್ರಗಳನ್ನು ಒಳಗೊಂಡಂತೆ ಅನೇಕ ಚಿತ್ರಗಳಲ್ಲಿ ರೇಡಿಯೋ ಉದ್ಘೋಷಕನ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಅವರು ಲಿಮ್ಕಾ ದಾಖಲಿಸಿರುವಂತೆ ಸುಮಾರು 54 ಸಾವಿರ ರೇಡಿಯೊ ಕಾರ್ಯಕ್ರಮಗಳು ಮತ್ತು ಸುಮಾರು 19 ಸಾವಿರ ಸ್ಪಾಟ್ಸ್ ಅಥವಾ ಜಿಂಗಲ್ಸ್ ನಿರ್ವಹಿಸಿದ್ದರು. 

ಅಮೀನ್ ಸಯಾನಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಮತ್ತು ಮಾಧ್ಯಮಲೋಕದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.  

ಅಮೀನ್ ಸಯಾನಿ 2024ರ ಫೆಬ್ರುವರಿ 20ರಂದು ನಿಧನರಾದರು.  ಅವರೊಬ್ಬ ಯುಗಪುರುಷ.   ನಮ್ಮ ಕಾಲದವರಿಗೆಲ್ಲ, ನಾವಿರುವವರೆಗೆ ಅವರು ಅಮರರು.

Respects to departed soul, great voice of our times, the  one and only Ameen Sayani 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ