ಡಿ. ಶೇಷಾಚಾರಿ
ಡಿ. ಶೇಷಾಚಾರಿ ನಮನ 🌷🙏🌷
ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧ ಹೆಸರಾದ ಹೈದರಾಬಾದ್ ಸಹೋದರರಲ್ಲಿ ಕಿರಿಯರಾದ ವಿದ್ವಾನ್ ಡಿ. ಶೇಷಾಚಾರಿ ಅವರು 2024ರ ಫೆಬ್ರುವರಿ 24ರಂದು ನಿಧನರಾದರು. ಅವರಿಗೆ 67 ವರ್ಷವಾಗಿತ್ತು. ಅವರು ಪತ್ನಿ ಶಾರದ, ಮಗಳು ಅರ್ಚನಾ ಮತ್ತು ಪುತ್ರ ಶ್ರೀನಿವಾಸ್ ರತ್ನಂ ಅವರನ್ನು ಅಗಲಿದ್ದಾರೆ.
ಪ್ರಪಂಚದಾದ್ಯಂತ ಕರ್ನಾಟಕ ಸಂಗೀತ ಗಾಯನವನ್ನು ಪ್ರಸ್ತುತಪಡಿಸಿದ ವಿದ್ವನ್ಮಣಿ ಸಹೋದರರುಗಳಾದ ಶೇಷಾಚಾರಿ ಮತ್ತು ರಾಘವಾಚಾರಿ ಅವರು ಕೊನೆಯ ಬಾರಿಗೆ 2024ರ ಜನವರಿ 30 ರಂದು ಹೈದರಾಬಾದಿನ ಶ್ರೀನಗರ ಕಾಲೋನಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತ್ಯಾಗರಾಜ ಆರಾಧನಾ ಮಹೋತ್ಸವದ ಅಂಗವಾಗಿ ಪಂಚರತ್ನ ಕೀರ್ತನೆಗಳನ್ನು ಪ್ರಸ್ತುತಪಡಿಸಿದ್ದರು.
ವಿದ್ವಾನ್ ಶೇಷಾಚಾರಿ ಅವರು ಅಕ್ಟೋಬರ್ 1956 ರಲ್ಲಿ ಜನಿಸಿದರು ಮತ್ತು ಅವರ ಸಹೋದರ ವಿದ್ವಾನ್ ರಾಘವಾಚಾರಿ ಜೂನ್ 1952 ರಲ್ಲಿ ಜನಿಸಿದರು. ಈ ಸಹೋದರರು ಸಾಂಪ್ರದಾಯಿಕ ಶಾಸ್ತ್ರೀಯ ಸಂಗೀತಗಾರರ ಕುಟುಂಬಕ್ಕೆ ಸೇರಿದವರು. ಈ ಪ್ರತಿಭಾನ್ವಿತರು ತಮ್ಮ ತಂದೆ ದರೂರ್ ರತ್ನಮಾಚಾರ್ಯುಲು ಅವರಿಂದ ಪ್ರಾಥಮಿಕ ಔಪಚಾರಿಕ ತರಬೇತಿಯನ್ನು ಪಡೆದರು.
ಹೈದರಾಬಾದ್ ಸಹೋದರರಿಗೆ ಹೈದರಾಬಾದ್ ಸಂಗೀತ ನಾಟಕ ಅಕಾಡೆಮಿ ಗೌರವ, ಮೂರು ಬಾರಿ ಸತತವಾಗಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಅತ್ಯುತ್ತಮ ಯುವ ಪ್ರತಿಭಾ ಪ್ರಶಸ್ತಿ , ಸಂಗೀತ ಅಕಾಡೆಮಿ ಪ್ರಶಸ್ತಿ, ತ್ಯಾಗರಾಜ ಕೃತಿಗಳ ಅತ್ಯುತ್ತಮ ನಿರೂಪಣೆಗಾಗಿ ಮಹಾರಾಜಪುರಂ ವಿಶ್ವನಾಥ ಅಯ್ಯರ್ ಪ್ರಶಸ್ತಿ, ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಗೌರವ, ಚೆನ್ನೈನ ಸಂಗೀತ ಅಕಾಡೆಮಿ ಪ್ರಶಸ್ತಿ, ಆಂಧ್ರಪ್ರದೇಶ ಸರ್ಕಾರದ ಕಲಾರತ್ನ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಅಗಲಿದ ವಿದ್ವಾನ್ ಶೇಷಾಚಾರಿ ಅವರು ತಮ್ಮ ದೃಢವಾದ, ಆಳವಾದ ಮತ್ತು ಪ್ರತಿಧ್ವನಿಸುವ ಸುಮಧುರ ಧ್ವನಿಗೆ ಹೆಸರುವಾಸಿಯಾಗಿದ್ದರು. ಈ ಮಹಾನ್ ಚೇತನಕ್ಕೆ ನಮನ.
Respects to departed soul Vidwan D. Sheshachary of Hyderabad Brothers
ಕಾಮೆಂಟ್‌ಗಳು