ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶಾಲ ಆರಾಧ್ಯ


  •  ವಿಶಾಲ ಆರಾಧ್ಯ


ವಿಶಾಲ ಆರಾಧ್ಯ ಅವರು ಸಂಗೀತ, ನಾಟಕ, ಸಾಹಿತ್ಯ, ಕಾವ್ಯವಾಚನ, ಶಿಕ್ಷಣ, ಸಾಹಿತ್ಯ ಸಂಘಟನೆ, ಪ್ರಕಾಶನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧಕರು ಮತ್ತು ಸಕ್ರಿಯರು.

ಫೆಬ್ರುವರಿ 8 ವಿಶಾಲ ಅವರ ಜನ್ಮದಿನ.  ವಿಶಾಲ ಆರಾಧ್ಯ ಅವರು ತಮ್ಮನ್ನು ಶಿಕ್ಷಕಿ, ಸರ್ವಕಾಲಿಕ ವಿದ್ಯಾರ್ಥಿ, ಜೀವನಪ್ರೇಮಿ, ಒಲವಕವಿ, writer, vocalist, voiceover  artiste, publisher ಎಂದು ಆಪ್ತವಾಗಿ ಗುರುತಿಸಿಕೊಳ್ಳುತ್ತಾರೆ.

ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಕಾವ್ಯವಾಚನಗಳಲ್ಲಿ ವಿಶಾಲ ಅವರ ಸಾಧನೆ ಇದೆ.  ಬರೆಹಗಳಲ್ಲಿ ಸೌಗಂಧಿಕಾ, ನಾ..ನೀ.. ಅಂತಹ ಕಾವ್ಯ ಸಂಕಲನಗಳು; ಗೊಂಬೆಗೊಂದು ಚೀಲ, ಬೊಂಬಾಯಿ ಮಿಠಾಯಿ ಅಂತಹ ಮಕ್ಕಳ ಸಾಹಿತ್ಯ, ನಡೆದಷ್ಟೂ ದಾರಿ ಅಂತಹ ಪ್ರಬಂಧ ಸಂಕಲನಗಳು, ಬಯಲ ಹಕ್ಕಿಗಳು ಅಂತಹ ಸಂಪಾದನೆಗಳು ಅಲ್ಲದೆ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿಬಂದ ಅನೇಕ ಕಥೆ, ಕಾವ್ಯ, ಚಿಂತನ ವೈವಿಧ್ಯಗಳಿವೆ.  ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲೂ ಅವರು ಸಕ್ರಿಯರು. ಅನೇಕ ಗಾಯನ, ಕಾವ್ಯವಾಚನ ಕಾರ್ಯಕ್ರಮ ನೀಡಿದ್ದಾರೆ.  ಪ್ರಸಿದ್ಧ ವೇದಿಕೆಗಳಲ್ಲಿ ಕಾವ್ಯಮಂಡನೆ, ವಿಚಾರ ಪ್ರಸ್ತುತಿ ಮಾಡಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ದತ್ತಿನಿಧಿ ಪ್ರಶಸ್ತಿ ಮತ್ತು ಅನೇಕ ಸಂಘಸಂಸ್ಥೆಗಳ ಬಹುಮಾನ ಗೌರವಗಳು ಇವರಿಗೆ ಸಂದಿವೆ.

ತಮ್ಮ ಹೆಸರಿನಷ್ಟೇ ವಿಶಾಲ ಆಸಕ್ತಿಗಳ ಸಹೃದಯಿ ಆತ್ಮೀಯರಾದ ವಿಶಾಲ ಆರಾಧ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ. 

Happy birthday Vishala Aradhya 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ