ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಸಂತಕುಮಾರ್ ಶೆಣೈ



ಯು. ವಸಂತ ಕುಮಾರ್‌ ಶೆಣೈ 

ಯು. ವಸಂತ ಕುಮಾರ್‌ ಶೆಣೈ  ಅವರು ರಂಗಕಲಾವಿದರಾಗಿ, ಬರಹಗಾರರಾಗಿ ಹೆಸರಾಗಿದ್ದವರು. 

ಗಂಗೊಳ್ಳಿಯ ಹೋಟೆಲ್‌ ಉದ್ಯಮಿ ಯು. ಶೇಷಗಿರಿ ಶೆಣೈ ಅವರ ಹಿರಿಯ ಪುತ್ರರಾದ ವಸಂತ ಕುಮಾರ್‌ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಗೀತ, ರಂಗಕಲೆಯಲ್ಲಿ ಶಿಕ್ಷಣ ಪಡೆದಿದ್ದಲ್ಲದೇ ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು. ಕುಂದಪ್ರಭ ಪತ್ರಿಕೆಯ ಸಂಪಾದಕರಾದ ಯು ಎಸ್‌ ಶೆಣೈ ಅವರು ಇವರ ಕಿರಿಯ ಸಹೋದರರು.

ಇ.ಎಸ್‌.ಐ. ಕೊರ್ಪರೇಷನ್‌ನ ನಿವೃತ್ತ ಹಿರಿಯ ಅಧಿಕಾರಿಗಳಾಗಿದ್ದ ವಸಂತ ಕುಮಾರ್‌ ಶೆಣೈ, ಬರೆಹಗಾರರಾಗಿ ಮತ್ತು ರಂಗ ಕಲಾವಿದರಾಗಿಯೂ ಹೆಸರಾಗಿದ್ದರು.

ವಸಂತ ಕುಮಾರ್‌ ಶೆಣೈ ಅವರು ಇ.ಎಸ್‌.ಐ.ಸಿ. ವೇದಿಕೆಗಳಲ್ಲದೇ ಬೆಂಗಳೂರಿನ ರಂಗಸಂಪದ, ಕಲಾಗಂಗೋತ್ರಿ  ಸೇರಿದಂತೆ ಅನೇಕ ಹವ್ಯಾಸಿ ನಾಟಕ ಸಂಸ್ಥೆಗಳಲ್ಲಿ ಕಲಾವಿದರಾಗಿ, ಮೇಕಪ್‌ ತಜ್ಞರಾಗಿ “ಮೈಮ್‌” ಕಲಾವಿದರಾಗಿ ಹೆಸರು ಗಳಿಸಿದ್ದರು. 

ವಸಂತ ಕುಮಾರ್‌ ಶೆಣೈ ಸ್ವತ: ಹಲವು ನಾಟಕಗಳನ್ನು ಬರೆದಿದ್ದರು. ಕವಿ, ಲೇಖಕರಾಗಿ ಗುರುತಿಸಲ್ಪಟ್ಟಿದ್ದರು. ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಉಡುಪಿ ರಂಗಭೂಮಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ರೇಡಿಯೋ, ನಾಟಕಗಳಲ್ಲಿ ವಿಶಿಷ್ಟ ಪಾತ್ರ ವಹಿಸಿದ್ದರು. 

ವಸಂತ ಕುಮಾರ್‌ ಶೆಣೈ ಅವರಿಗೆ ನೇಪಥ್ಯ ಸೇವೆಗಾಗಿ ಮೇಕಪ್ ನಾಣಿ ಪ್ರಶಸ್ತಿ, ಕಲಾಗಂಗೋತ್ರಿ ಸಂಸ್ಥೆಯ  'ಪದ್ದಣ್ಣ' ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. 

ಯು. ವಸಂತ ಕುಮಾರ್‌ ಶೆಣೈ 2024ರ ಮಾರ್ಚ್ 18ರಂದು ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.

On Rememberance  Day of Theatre artiste and writer U. Vasantha Kumar Shenoy 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ