ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂತ್ರಾಲಯಕೆ ಹೋಗೋಣ



ಮಂತ್ರಾಲಯಕೆ ಹೋಗೋಣ
ಗುರುರಾಯರ ದರುಶನ ಮಾಡೋಣ

ತುಂಗಾ ನದಿಯಲ್ಲಿ ಮೀಯೋಣ
ಸುರಗಂಗಾ ಸ್ನಾನವದೆನ್ನೋಣ
ಮಂಗಳಮೂರುತಿ ರಾಘವೇಂದ್ರನ
ಅಂಘ್ರಿಗಳಿಗೆ  ಶರಣಾಗೋಣ
ಮಂತ್ರಾಲಯಕೆ ಹೋಗೋಣ

ಅನಂತ ಜನುಮವ ಕೇಳೋಣ
ಆ ಮುಕುತಿಯು ಬೇಡ ಎನ್ನೋಣ
ಜನುಮಜನುಮದಲು ಚರಣಕಮಲದಿ
ಭೃಂಗಗಳಾಗಿ ನಲಿಯೋಣ
ಮಂತ್ರಾಲಯಕೆ ಹೋಗೋಣ
ಗುರುರಾಯರ ದರುಶನ ಮಾಡೋಣ

ಸಾಹಿತ್ಯ: ಚಿ. ಉದಯಶಂಕರ್



Tag: Mantralayake hogona

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ