ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶುಭಶ್ರೀ ಭಟ್ಟ


 ಶುಭಶ್ರೀ ಭಟ್ಟ


ಸಾಫ್ಟವೇರ್ ತಂತ್ರಜ್ಞೆಯಾದ ಶುಭಶ್ರೀ ತಾನು ಬೆಳೆದ ಗ್ರಾಮೀಣ ಪರಿಸರ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಅಂತರಂಗೀಕರಿಸಿಕೊಂಡಿರುವ ಭಾವುಕ ಸಹೃದಯಿ.

ಮೇ 21, ಶುಭಶ್ರೀ ಅವರ ಜನ್ಮದಿನ.  ಇವರ ತವರೂರು ಕುಮಟಾ ಸಮೀಪದ ಗುಡಬಳ್ಳಿ.  ಇಂಜಿನಿಯರಿಂಗ್ ಓದಿ ಸಾಫ್ಟ್ವೇರ್ ಉದ್ಯೋಗ ನಿರ್ವಹಿಸಿದ್ದಾರೆ.  ಪತಿಯವರ ಊರು ಶೃಂಗೇರಿ. ಕುಟುಂಬದೊಂದಿಗೆ ಪ್ರಸಕ್ತ ವಾಸ ಬೆಂಗಳೂರು. 

ಅಜ್ಜಿ ಮತ್ತು ಅಪ್ಪನಿಂದ ಶುಭಶ್ರೀ ಅವರಲ್ಲಿ  ಓದು ಬರಹದ ಅಪಾರ ಪ್ರೀತಿ ಮೊಳೆಯಿತು.  ರಾಜ್ಯದ  ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಇವರ ಲೇಖನಗಳು, ಕಥೆಗಳು, ಅಂಕಣಗಳು ಪ್ರಕಟಗೊಂಡು ಜನ ಮೆಚ್ಚುಗೆ ಗಳಿಸಿವೆ. 'ಹಿಂದಿನ ನಿಲ್ದಾಣ' ಎಂಬ ಪ್ರಬಂಧ ಸಂಗ್ರಹ ಮತ್ತು  'ಇಹದ ತಳಹದಿ' ಎಂಬ ಅಂಕಣ ಬರಹಗಳ ಸಂಕಲನ,  ಕೃತಿರೂಪವಾಗಿ ಮೂಡಿವೆ. 

ಶುಭಶ್ರೀ ಭರತನಾಟ್ಯ ಕಲಿತಿದ್ದಾರೆ. ಕಥಕ್ ಕಲಿಯಬೇಕೆಂಬ ಆಶಯ ಅವರಲ್ಲಿದೆ. ಕೃಷ್ಣನೆಂದರೆ  ಶುಭಶ್ರೀಗೆ ಅಪಾರ ಅಕ್ಕರೆ. ಹೀಗಾಗಿ ಶುಭಶ್ರೀ ಅವರು, ಗೋಕುಲದಲ್ಲಿನ ಕೃಷ್ಣ-ರಾಧೆಯರ  ಅಂದಿನ ಯುಗದ ಅನುಭಾವ ತಂದುಕೊಡುವ, ಕನ್ನಡದ ಹಲವು ಭಾವಗೀತೆಗಳ ಗಾನಮಾಲೆಯಾದ Tales Of Parijatha ಎಂಬ ತಮ್ಮದೇ ಯೂಟ್ಯೂಬ್ ಚಾನೆಲ್ ಮೂಡಿಸಿದ ಚತುರೆ. 

ಶುಭಶ್ರೀ ಅನೇಕ ವಿಚಾರ‍ ಸಂಕಿರಣಗಳಲ್ಲಿ ಮತ್ತು ಕವಿಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ. ಅವರ 'ಹಿಂದಿನ ನಿಲ್ದಾಣ' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿ ಮತ್ತು ಹಲವಾರು ಗೌರವಗಳು ಸಂದಿವೆ.

ಆತ್ಮೀಯ ಸರಳ,  ಸಹೃದಯಿ,  ಪ್ರತಿಭಾನ್ವಿತೆ ಶುಭಶ್ರೀ ಭಟ್ಟ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 



Happy birthday Shubhashree Bhat 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ