ದಿಗ್ವಿಜಯ ಹೆಗ್ಗೋಡು
ದಿಗ್ವಿಜಯ ಹೆಗ್ಗೋಡು
Happy birthday to Great Theatre Artiste, Musician, Music Composer and Director and Guru Digvijaya Heggodu 🌷🌷🌷
ದಿಗ್ವಿಜಯ ಹೆಗ್ಗೋಡು ಅವರು ಹೆಸರಾಂತ ರಂಗಕರ್ಮಿ, ಸಂಗೀತ ಸಂಯೋಜಕ, ಸಂಗೀತಗಾರ, ನಿರ್ದೇಶಕ ಮತ್ತು ರಂಗಶಿಕ್ಷಕರು. ನೂರಾರು ಯಕ್ಷಗಾನ ಪ್ರಸಂಗಗಳಲ್ಲಿ ನಟಿಸಿದ ಅನುಭವವೂ ಇವರೊಂದಿಗೆ ಬೆಸೆದಿದೆ.
ಜೂನ್ 26, ದಿಗ್ವಿಜಯ ಹೆಗ್ಗೋಡು ಅವರ ಜನ್ಮದಿನ. ಮೂಲತಃ ಇವರು ಶಿವಮೊಗ್ಗ ಜಲ್ಲೆಯ, ಸಾಗರದ ಬಳಿಯ, ಭೀಮನಕೋಣೆಯ, ಕೆರೆಮನೆಯವರು. ಪ್ರಸ್ತುತ ಇವರು ಮೈಸೂರನ್ನು ಕೇಂದ್ರವಾಗಿಸಿಕೊಂಡಿರುವ ರಂಗಕರ್ಮಿ. ಇವರ ಸಹೋದರ ಶ್ರೀಧರ ಹೆಗ್ಗೋಡು ಅವರು ಸಹಾ ಮಹಾನ್ ರಂಗಕರ್ಮಿ.
ದಿಗ್ವಿಜಯ ಅವರು ನೀನಾಸಮ್ ರಂಗಶಿಕ್ಷಣ ಕೇಂದ್ರದ ಮೂಲಕ ರಂಗಶಿಕ್ಷಣದಲ್ಲಿ ಡಿಪ್ಲಮೊ ಪದವಿ ಪಡೆದಿದ್ದಾರೆ. ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗುರು ಶ್ರೀ ಮಾರ್ಗೀ ಸಜೀವ್ ನಾರಾಯಣ ಚಾಕ್ಯಾರ್ ಅವರ ಬಳಿ ಪಾರಂಪರಿಕ ಪದ್ಧತಿಯಲ್ಲಿ ಕೂಡಿಯಾಟ್ಟಮ್ ಕಲೆಯ ಶಿಕ್ಷಣವನ್ನೂ ಪಡೆದಿದ್ದಾರೆ. ದಿಗ್ವಿಜಯ ಹೆಗ್ಗೋಡು ಅವರು ವೃತ್ತಿಯಲ್ಲಿ ನಟ, ಸಂಗೀತ ಸಂಯೋಜಕ, ರಂಗ ಶಿಕ್ಷಕರಾಗಿದ್ದಾರೆ.
ದಿಗ್ವಿಜಯ ಅವರಿಗೆ ಮೊದಲಿನಿಂದಲೂ ರಂಗಾಸಕ್ತಿ. ರಂಗಭೂಮಿ ಪದವಿ ಪಡೆಯುವ ಮೊದಲೇ 'ನಾಯಿಮರಿ ನಾಟಕ' (ಮಕ್ಕಳ ನಾಟಕ ಕಿನ್ನರ ಮೇಳ ತುಮರಿ 1994), ‘ಪುಟ್ಟವೋಲ್ಯಾ' (ದೂರದರ್ಶನಕ್ಕಾಗಿ ತಯಾರಿಸಿದ ಮಕ್ಕಳ ನಾಟಕ 1994), ‘ಹೆಡ್ಡಾಯಣ’ (ಮಕ್ಕಳ ನಾಟಕ 1995),
‘ಝಮ್ ಝಮ್ ಆನೆ’ (ಮಕ್ಕಳ ನಾಟಕ 1996) ಮುಂತಾದವುಗಳಲ್ಲಿ ಪಾಲ್ಗೊಂಡಿದ್ದರು. ಹಲವಾರು ಬಯಲಾಟದ ಮೇಳಗಳಲ್ಲಿ ಕೆಲಸ ಮಾಡಿದ ಅನುಭವ ಜೊತೆಗಿತ್ತು. ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳ ಅಧ್ಯಯನ ಮತ್ತು ಪ್ರಸಂಗಗಳಲ್ಲಿ ಪಾತ್ರ ಮಾಡಿದ ಅನುಭವ ಜೊತೆಗಿತ್ತು. 100ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳನ್ನು ನೀಡಿದ ಅನುಭವ ಸಹ ಇವರ ಜೊತೆಗಿದೆ.
ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ, ದಿಗ್ವಿಜಯ ಹೆಗ್ಗೋಡು ಅವರು ಈ ಕೆಳಕಂಡ ಪ್ರಯೋಗಗಳಲ್ಲಿ ಭಾಗವಹಿಸಿದ್ದರು:
ಮರ್ಚೆಂಟ್ ಆಫ್ ವೆನಿಸ್ : ಶೇಕ್ಸ್ ಫಿಯರ್, ನಿರ್ದೇಶನ : ಸಿ ಆರ್ ಜಂಬೆ;
ಹಂಸ ದಮಯಂತಿ : ಸಂಗೀತ ನಾಟಕ ಡಾ. ಶಿವರಾಮ ಕಾರಂತ, ನಿರ್ದೇಶನ : ಬಿ ಆರ್ ವೆಂಕಟರಮಣ ಐತಾಳ.";
ಸತ್ರು ಅಂದರೆ ಸಾಯ್ತಾರ : ಅಂಧೇರಿ ನಗರಿ ಚೌಪಟ್ ರಾಜ ದ ಕನ್ನಡ ರೂಪಾಂತರ : ವೈದೇಹಿ, ನಿರ್ದೇಶನ : ಬಿ. ವಿ . ಕಾರಂತ;
ಸ್ಮಶಾಣ ಕುರುಕ್ಷೇತ್ರಮ್ : ಕುವೆಂಪು, ನಿರ್ದೇಶನ : ಕೆ.ವಿ. ಅಕ್ಷರ;
ಈ ನರಕ ಈ ಪುಲಕ : ಪಿ. ಲಂಕೇಶ, ನಿರ್ದೇಶನ : ನಟರಾಜ ಹೊನ್ನವಳ್ಳಿ
ದಿಗ್ವಿಜಯ ಹೆಗ್ಗೋಡು ಅವರು ನೀನಾಸಮ್ ತಿರುಗಾಟದಲ್ಲಿ ಭಾಗವಹಿಸಿದ ನಾಟಕಗಳೆಂದರೆ:
ಸ್ಮಶಾಣ ಕುರುಕ್ಷೇತ್ರಮ್ : ಕುವೆಂಪು, ನಿರ್ದೇಶನ : ಕೆ ವಿ ಅಕ್ಷರ;
ಭಗವದ್ಧಜ್ಜುಕೀಯಮ್ : ನಿರ್ದೇಶನ : ಕಾವಲಮ್ ನಾರಾಯಣ ಪಣಿಕ್ಕರ್;
ಮೂವರು ಅಕ್ಕತಂಗಿಯರು : ಆ್ಯಂಟನ್ ಚೆಕಾವ್ ನ ಕನ್ನಡ ಅನುವಾದ: ವೈದೇಹಿ, ನಿರ್ದೇಶನ :ಸಿ. ಆರ್. ಜಂಬೆ;
ಅವಸ್ಥೆ : ಅನಂತಮೂರ್ತಿ ಅವರ ಕಾದಂಬರಿ ಆಧಾರಿತ. ನಿರ್ದೇಶನ : ಪ್ರಕಾಶ್ ಬೆಳವಾಡಿ;
ಮೊದಲಗಿತ್ತಿ :ಭಾಗೀರಥೀ ಬಾಯಿ ಕದಮ್, ನಿರ್ದೇಶನ : ಬಹರುಲ್ ಇಸ್ಲಾಮ್
ಆಮನಿ : ಕೀರ್ತಿನಾಥ ಕುರ್ತುಕೋಟಿ. ನಿರ್ದೇಶನ : ಕೆ. ವಿ. ಅಕ್ಷರ;
ದಿಗ್ವಿಜಯ ಹೆಗ್ಗೋಡು ಅವರು ಬೇರೆ ಬೇರೆ ರಂಗತಂಡಗಳಲ್ಲಿ ಭಾಗವಹಿಸಿರುವ ಪ್ರಯೋಗಗಳಲ್ಲಿ ಈ ಕೆಳಗಿನವು ಸೇರಿವೆ:
ಅರಾಜಕನೊಬ್ಬನ ಆಕಸ್ಮಿಕ ಸಾವು, ನಿರ್ದೇಶನ- ನಟರಾಜ ಹೊನ್ನವಳ್ಳಿ, ಚಿಣ್ಣ ಬಣ್ಣ ರಂಗತಂಡ, ಬೆಂಗಳೂರು;
ಧರ್ಮ ದುರಂತ : ನಿರ್ದೇಶನ ಎಸ್. ರಘುನಂದನ.
ಕರ್ಣಾದರ್ಶ : ನಿರ್ದೇಶನ : ಬಿ ಆರ್. ವೆಂಕಟರಮಣ ಐತಾಳ. ಪ್ರಯಾಣ ರಂಗತಂಡ, ಹೆಗ್ಗೋಡು;
ಕೊಳಲು ಭೂಮಿಗೀತ : ನಿರ್ದೇಶನ : ಬಿ ಆರ್. ವೆಂಕಟರಮಣ ಐತಾಳ. ಪ್ರಯಾಣ ರಂಗತಂಡ, ಹೆಗ್ಗೋಡು;
ಗೋಕುಲ ನಿರ್ಗಮನ : ನಿರ್ದೇಶನ : ಬಿ ವಿ ಕಾರಂತ,
ನಾನು : ಎಮ್ ಗೋಪಾಲ ಕೃಷ್ಣ ಅಡಿಗರ ಕವನದ ರಂಗರೂಪ;
ಗಾರ್ಧಭ ಮನುಷ್ಯ ಪ್ರಹಸನಮ್ : ನಿರ್ದೇಶನ : ನಟರಾಜ ಹೊನ್ನವಳ್ಳಿ;
ತೊಗಲು ಗೊಂಬೆಯಾಟ
ಅಕಟವಿಕಟ ಪ್ರಹಸನಮ್ : ನಿರ್ದೇಶನ : ಚನ್ನಕೇಶವ;
ಮಣ್ಣಿನ ಬಂಡಿ : ನಿರ್ದೇಶನ : ಸುರೇಶ ಆನಗಳ್ಳಿ.
ದಿಗ್ವಿಜಯ ಹೆಗ್ಗೋಡು ಅವರು ಸಂಗೀತ ನಿರ್ದೇಶಕರಾಗಿ ನೆನಪಾದಳು ಶಾಕುಂತಲೆ, ಈ ಕೆಳಗಿನವರು, ಪ್ರತಿಮಾ ನಾಟಕ, ಹಬ್ಬದ ಹನ್ನೆರಡನೆಯ ರಾತ್ರಿ, ಯಹೂದಿ ಕಿ ಲಡಕಿ, ಸೀತಾ ಸ್ವಯಂವರ, ಚಿತ್ರಪಟ, ಮಾಳವಿಕಾಗ್ನಿಮಿತ್ರಮ್, ಪ್ರಮೀಳಾರ್ಜುನೀಯಮ್, ಬೆಕ್ಕು ಬಾವಿ, ವಾಸಾಂಸಿ ಜೀರ್ಣಾನಿ, ಚಾವುಂಡರಾಯ, ಸಿರಿಗೆ ಸೆರೆ, ಸೇವಂತೀಪ್ರಸಂಗ, ಕಿಷ್ಕಿಂದಾಯಣ, ಜತೆಗಿರುವನು ಚಂದಿರ, ಕಂಚುಗನ್ನಡಿ, ಅಂಧಯುಗ, ಮ್ಯಾಕ್ ಬೆತ್, ಚೌಕಚಕ್ರ, ಕ್ರೌಂಚಗೀತೆ, ಅಳಿಲು ರಾಮಾಯಣ ಮುಂತಾದ ನಾಟಕಗಳಿಗೆ ಕೆಲಸ ಮಾಡಿದ್ದಾರೆ.
ದಿಗ್ವಿಜಯ ಹೆಗ್ಗೋಡು ಅವರು ರಂಗನಿರ್ದೇಶಕರಾಗಿ ಚಂದ್ರಹಾಸ, ಮೀಡಿಯಾ, ತುಘಲಕ್, ಪ್ರಮೀಳಾರ್ಜುನೀಯಮ್ ಮುಂತಾದ ನಾಟಕಗಳಿಗೆ ಕೆಲಸ ಮಾಡಿದ್ದಾರೆ.
ದಿಗ್ವಿಜಯ ಹೆಗ್ಗೋಡು ಅವರಿಗೆ ಹಾರ್ಮೋನಿಯಮ್, ತಬಲ, ಡೋಲಕ್, ಚೆಂಡೆ, ಮದ್ದಳೆ, ತ್ಯಾಸೆ, ಮೆಳಾವ್, ಮೃದಂಗ, ಖಂಜೀರ ಹೀಗೆ ಹಲವಾರು ವಾದನಗಳನ್ನು ನುಡಿಸುವ ಅನುಭವ ಇದೆ.
ದಿಗ್ವಿಜಯ ಅವರು ಹೆಗ್ಗೋಡಿನ ಬಾಲನಂದನದಲ್ಲಿ ಹಲವಾರು ವರ್ಷ ಮಕ್ಕಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ. ಮೈಸೂರು, ಬಾಗಲಕೋಟೆ, ಮಂಚೀಕೇರಿ, ಯಲ್ಲಾಪುರ, ಹೊಸೂರು ಹೀಗೆ ಹಲವಾರು ಸ್ಥಳಗಳಲ್ಲಿ ಮಕ್ಕಳ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಾರೆ ನೀನಾಸಮ್, ರಂಗಾಯಣ, ಗೊಂಬೆಮನೆ, ಭೂಮಿ ತಿಪಟೂರು, ಚಿಣ್ಣ-ಬಣ್ಣ, ಬೆನಕ, ಅನೇಕ, ಸಂಬಂಧ, ಪ್ರಯಾಣ, ರಂಗರಥ, ಜನದನಿ, ಸಂಚಲನ ಮೈಸೂರು. ಇಂತಹ ಹಲವು ಪ್ರಮುಖ ರಂಗ ಸಂಸ್ಥೆಗಳಲ್ಲಿ ಕೆಲಸಮಾಡಿದ ಅನುಭವ ಇವರೊಂದಿಗಿದೆ. ಶ್ರೀಯುತರಾದ ಕೆ. ವಿ. ಸುಬ್ಬಣ್ಣ, ಬಿ. ವಿ. ಕಾರಂತ, ಚಿದಂಬರ ರಾವ್ ಜಂಬೆ, ಕೆ. ವಿ. ಅಕ್ಷರ, ಬಿ.ಆರ್. ವೆಂಕಟರಮಣ ಐತಾಳ, ರಘುನಂದನ, ಬಹುರುಲ್ ಇಸ್ಲಾಮ್, ಕಾವಲಮ್ ನಾರಾಯಣ ಪಣಿಕ್ಕರ್, ಸುರೇಶ ಆನಗಳ್ಳಿ, ಭಾಗೀರಥೀ ಬಾಯಿ ಕದಂ, ಚಂದ್ರದಾಸನ್, ಪ್ರಕಾಶ್ ಬೆಳವಾಡಿ, ಪ್ರಕಾಶ ಗರೂಡ, ಚನ್ನಕೇಶವ ಇಕ್ಬಾಲ್ ಅಹಮ್ಮದ್, ನಟರಾಜ ಹೊನ್ನವಳ್ಳಿ, ಶ್ರೀನಿವಾಸ ಭಟ್ (ಚೀನಿ) ಸಂಜಯ್ ಉಪಾದ್ಯಾಯ, ಸವಿತಾರಾಣಿ, ಹುಲುಗಪ್ಪ ಕಟ್ಟೀಮನಿ, ಶಶಿಧರ್ ಭಾರಿಗಾಟ್, ಮೊದಲಾದವರೊಂದಿಗೆ ರಂಗಭೂಮಿಯಲ್ಲಿ ಕೆಲಸ ಮಾಡಿದ ಶ್ರೀಮಂತ ಅನುಭವ ಇವರದಾಗಿದೆ.
ರಂಗಾಯಣ ಮೈಸೂರಿನ ಅಂಗ ಸಂಸ್ಥೆಯಾದ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಕರಾಗಿ ಹೊರಗುತ್ತಿಗೆಯ ಆಧಾರದಲ್ಲಿ ಕೆಲಸ ಮಾಡಿದ್ದಾರೆ.
ದಿಗ್ವಿಜಯ ಹೆಗ್ಗೋಡು ಅವರು ಭಿನ್ನಷಡ್ಜ ಎಂಬ ಹೆಸರಿನಲ್ಲಿ ಅನೇಕ ಕನ್ನಡ ಭಾವಗೀತೆಗಳಿಗೆ ಹೊಸದಾಗಿ ರಾಗಸಂಯೋಜನೆ ಮಾಡಿದ್ದಾರೆ. ಭಿನ್ನಷಡ್ಜ ಸ್ಟೂಡಿಯೋಸ್ ಹೆಸರಿನಲ್ಲಿ ನಾಟಕ, ಕಿರುಚಿತ್ರ, ಚಲನಚಿತ್ರಗಳಿಗೆ ಹಿನ್ನೆಲೆ ಸಂಗೀತ ಮತ್ತು ಶಬ್ದವಿನ್ಯಾಸ ನೀಡುತ್ತಿದ್ದಾರೆ. ಇವರು ಪ್ರತಿಭಾನ್ವಿತ ಕೆಲವು ಕೆಲಸಗಳ ಲಿಂಕ್ ಇಲ್ಲಿದೆ
https://youtu.be/XFDyQnYnQyQ
https://youtu.be/SWoL-Ik1fGo
https://youtu.be/2HEImh5gJlA
ಕನ್ನಡ ರಂಗಭೂಮಿಯ ಎಲ್ಲಾ ವಿಭಾಗಗಳಲ್ಲೂ ಸಮರ್ಥವಾಗಿ ಕೆಲಸ ಮಾಡುವ ಮತ್ತು ರಂಗಸಂಗೀತವನ್ನು ನೀಡುತ್ತಿರುವ ಅಪರೂಪದ ಕಲಾವಿದ ದಿಗ್ವಿಜಯ ಹೆಗ್ಗೋಡು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Digvijay Heggodu
ಕಾಮೆಂಟ್‌ಗಳು