ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಾಡೊಂದ ಹಾಡುವೆ

 




ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀನೆಂದು ಬರುವೇ
ಹಾಡೊಂದ ಹಾಡುವೆ ನೀ ಕೇಳು ಮಗುವೇ

ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರಾ ಭೊಗ ನಿನಗಿಲ್ಲಿ ಇಲ್ಲ
ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲ
ಹಾಡೊಂದ ಹಾಡುವೆ ನೀ ಕೇಳು ಮಗುವೆ

ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ
ಆ ಸುಖದೆ ನಾ ಮರೆವೆ ಈ ಬಾಳ ಚಿಂತೆ
ಅದ ಕೇಳೊ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆ ಎಲ್ಲ

ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀನೆಂದು ಬರುವೇ
ಹಾಡೊಂದ ಹಾಡುವೇ
ನೀ ಕೇಳು ಮಗುವೆ

ಚಿತ್ರ: ನಾಂದಿ
ರಚನೆ: ಆರ್ ಎನ್ ಜಯಗೋಪಾಲ್
ಗಾಯನ: ಪಿ ಬಿ ಶ್ರೀನಿವಾಸ್
ಸಂಗೀತ: ವಿಜಯಭಾಸ್ಕರ್

Hadonda Haaduve

ಇಂದು ಈ ಹೃದಯವಂತಿಕೆಗೆ ಧ್ವನಿಯಾದ ಅಮರ ಗಾಯಕ ಪಿ ಬಿ ಶ್ರೀನಿವಾಸ್ ಅವರ ಜನ್ಮದಿನ ಸ್ಮರಣೆ
ನನಗೆ ಎಲ್ಲ ಹಾಡುಗಳಿಗಿಂತ ಇಷ್ಟವಾದ ಹಾಡಿದು.  ಯಾರೋ ಪ್ರೀತಿ ವಾತ್ಸಲ್ಯ ಅಕ್ಕರೆಯ ಅನುಭೂತಿಗಳನ್ನೆಲ್ಲ ಹಿತವಾಗಿ ಹನಿಸಿ ನನಗಾಗಿಯೇ ಹಾಡುತ್ತಿದ್ದಾರೆಂಬ ಭಾವ ಮತ್ತು ಸಮಾಧಾನ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ