ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೀಗೆ ಹುಣ್ಣಿಮೆ


 

ಸೀಗೆ ಹುಣ್ಣಿಮೆ 


ಆಶ್ವೀಜ ಶುಕ್ಲ ಪೂರ್ಣಿಮಾಕ್ಕೆ ಸೀಗೆ ಹುಣ್ಣಿಮೆ ಅನ್ನುತ್ತಾರೆ. ಕೆಲವು ಉಚ್ಚಾರಗಳಲ್ಲಿ ಇದು ಶೀಗೆ ಹುಣ್ಣಿಮೆ, ಶಿಗಿ ಹುಣ್ಣಿಮೆ ಎಂದೂ ಇದೆ.  ಇದು ರೈತನ ಹಬ್ಬ. ಮುತ್ತೈದೆಯರು ಹಸಿರು ಪಯಿರನ್ನು (ಸಾಮಾನ್ಯವಾಗಿ ರಾಗಿ) ಬೆಳೆಸಿರುವ ಗೆರಸಿಯನ್ನು ತಲೆಯ ಮೇಲೆ ಹೊತ್ತು ಹಾಡುಗಳನ್ನು ಹೇಳುತ್ತ ಜಲಾಶಯಕ್ಕೆ ಹೋಗಿ ಸೀಗೆ(ಗೌರಿ)ಯನ್ನು ಪೂಜೆ ಮಾಡಿ ಬರುತ್ತಾರೆ. ಭೂಮಿ ತಾಯಿಗೆ ಬಯಕೆ ಊಟ ಮಾಡಿಸಲು ಬಗೆಬಗೆಯ ತಿಂಡಿತಿನಿಸುಗಳನ್ನು ತೆಗೆದುಕೊಂಡು ಹೋಗಿ ಹೊಲಗದ್ದೆಗಳಲ್ಲಿ ಎಡೆಯಿಟ್ಟು ಊಟ ಮಾಡಿ ಬರುತ್ತಾರೆ. ಕೆಲವರು ಬೆಳದಿಂಗಳಲ್ಲಿ ಪಾಯಸದ ಊಟ ಮಾಡುತ್ತಾರೆ. ಇದು ಮಳೆ ಬೆಳೆಯನ್ನು ಕೊಡುವ ದೇವೇಂದ್ರನನ್ನು ತೃಪ್ತಿಪಡಿಸಲು ಮಾಡುವ ಹಬ್ಬವೆಂದೂ ಕೆಲವರ ನಂಬಿಕೆ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ