ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಳೆಬಿಲ್ಲು




ಮಳೆಬಿಲ್ಲು

ಮುಗಿಲಿನಲ್ಲಿ ಮಳೆಬಿಲ್ಲ ಕಾಣುತಲೆ ನಾನು
ನೆಗೆದು ಕುಣಿದಾಡುವುದು ಹೃದಯ ತಾನು!
ಅಂತೆ ಇದ್ದುದು ಮೊದಲು ಚಿಕ್ಕಂದಿನಂದು;
ಅಂತೆ ಇಹುದೀ ಮೆರೆವ ಯೌವನದಲಿಂದು,
ಅಂತೆ ಇರಲೆನಗಿನ್ನು ಮುಪ್ಪಿನಲಿ ಮುಂದೆ -
ಅಂತಿರದೆ, ಸಾವು ಬರಲಂದೆ!

ಮನುಜನಿಗೆ ಮಗು ತಂದೆ - ನಾನದನು ಬಗೆದು,
ಹೊಂದಿಸಲು ಬಯಸುವೆನು ದಿನಗಳನು ತೆಗೆದು
ಒಂದಕೊಂದನು ಪ್ರಕೃತಿಭಕ್ತಿಯಲಿ ಬಿಗಿದು.

ಕನ್ನಡದಲ್ಲಿ ಸಾಹಿತ್ಯ: ಬಿ. ಎಂ. ಶ್ರೀ


My heart leaps up when I behold
A Rainbow in the sky:

So was it when my life began;
So is it now I am a man;
So be it when I shall grow old,
Or let me die!

The Child is father of the man;
And I could wish my days to be
Bound each to each by natural piety.

-William Wordsworth (1770-1850)

Tag: Male billu, Rainbow











ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ