ಹೂವ ತಂದು ಮಾರಿದಳು
ಹೂವ ತಂದು ಮಾರಿದಳು ಹೂವಾಡಗಿತ್ತಿ,
ಆವ ಪುಣ್ಯ ಪಡೆದವಳೊ ಆ ಮಹಾರಾಯತೀ
ಹೂವ ತಂದು ಮಾರಿದಳು ಹೂವಾಡಗಿತ್ತಿ..
ಒಂದು ಮಲ್ಲಿಗೇ ಅರಳೂ,
ಒಂದು ಸಂಪಿಗೇ ಎಸಳೂ,
ಒಂದು ಮರುಗದ ಕೊರಳು,
ಒಂದಾಗಲು
ನಾವು ಮೂವರೂ ಒಂದು,
ತಮ್ಮ ಹಾಗೇ ಎಂದು
ನಗುನಗುತಾ ಹೇಳುತಿದೆ
ಹೂ ಮಾಲೆ ಇಂದು
ಹೂವ ತಂದು ಮಾರಿದಳು ಹೂವಾಡಗಿತ್ತಿ..
ಜೀವನವಾ ಜಾಲಾಡಿ ಆಣಿ ಮುತ್ತೂ ಆರಿಸಿದೆ
ಆರಿಸಿದ ಮುತ್ತುಗಳಾ ಮಾಲೇ ನೀ ಮಾಡಿದೆ
ಮುತ್ತ ಕೇಳಲೂ ಬರುವಾ
ಎಲ್ಲರಿಗೂ ಎತ್ತಿಕೊಡೇ
ಎನಿತೆನುತ ಹೇಳುತಿದೇ
ಹೂ ಮಾಲೆ ಇಂದು
ಹೂವ ತಂದು ಮಾರಿದಳು ಹೂವಾಡಗಿತ್ತಿ
ರೂಪವಂತರಾದವರ
ಹರೆಯ ನಿಂತು ನೋಡುವುದು
ನೋಡಿ ಸೋತು ಹೋದವರ
ಕೆಳಗೆ ತಳ್ಳಿ ಓಡುವುದು
ಒಳ್ಳೇ ಗುಣ ರತ್ನಗಳು
ಹೆಣ್ಣೊಳಗೇ ಇದೆಯೆಂದು
ನಗುನಗುತಾ ಹೇಳುತಿದೆ
ಹೂ ಮಾಲೆ ಇಂದು
ಹೂವ ತಂದು ಮಾರಿದಳು ಹೂವಾಡಗಿತ್ತಿ.
ಆವ ಪುಣ್ಯ ಪಡೆದವಳೊ
ಆ ಮಹಾರಾಯತೀ
ಚಿತ್ರ: ಚಿನ್ನಾರಿ ಪುಟ್ಟಣ್ಣ (೧೯೬೮) -
ಗೀಎ:ಹೂವ ತಂದು ಮಾರಿದಳು
ಸಂಗೀತ : ಟಿ.ಜಿ.ಲಿಂಗಪ್ಪ
ಸಾಹಿತ್ಯ : ಜಿ.ವಿ.ಅಯ್ಯರ್
ಗಾಯನ : ಎಸ್.ಜಾನಕಿ, ರೇಣುಕಾ, ಬೆಂಗಳೂರು ಲತಾ
Thank you Sahana Rao 🌷🙏🌷
ಕಾಮೆಂಟ್‌ಗಳು