ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಪ್ತಿ ಪಟವರ್ಧನ್


 ಆಪ್ತಿ ಪಟವರ್ಧನ್


ಆಪ್ತಿ ಪಟವರ್ಧನ್ ಕ್ರಿಯಾಶೀಲ ಬಹುಮುಖಿ ಯುವ ಪ್ರತಿಭೆ.

ಸೆಪ್ಟೆಂಬರ್ 26,  ಆಪ್ತಿ ಅವರ ಜನ್ಮದಿನ.  ಇವರು ಇಂದು ತಮ್ಮ ಹದಿನೆಂಟರ ಹರೆಯಕ್ಕೆ ಕಾಲಿರಿಸಿದ್ದಾರಾದರೂ ಈಗಾಗಲೇ ಗಮನಾರ್ಹ ಸಾಧನೆ ಮಾಡಿದ್ದಾರೆ. ತಾಯಿ ರಶ್ಮಿ - ತಂದೆ ಕಿಶೋರ್ ಪಟವರ್ಧನ್ ಇಬ್ಬರೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿವುಳ್ಳ ಪ್ರತಿಭಾನ್ವಿತರು. ಆಪ್ತಿ  ತಮ್ಮ ತಾಯಿಯ ಊರು ಬಂಗಾಡಿ ಹಾಗೂ ತಂದೆಯ ಊರು ಮುಂಡಾಜೆ, ಇವೆರಡು ಊರುಗಳ ಹೆಸರನ್ನು ಸೇರಿಸಿ 'ಮುಂಗಾಡಿ' ಎಂದು  ತಮ್ಮ ಕಾಲ್ಪನಿಕ ಊರನ್ನು ಸೃಷ್ಟಿಸಿಕೊಂಡು ತಮ್ಮ ಹೆಸರಿನ‌ ಜೊತೆಗೆ ಸೇರಿಸಿಕೊಂಡಿದ್ದಾರೆ.

ಶಾಲಾದಿನಗಳಿಂದಲೂ ಆಪ್ತಿ ಅವರು ಕಲಿಕೆಯಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳಿಗಳಲ್ಲಿ ಸದಾ ಮುಂದು.  ಕಥಾ ನಿರೂಪಣೆಯಲ್ಲಿ ಇವರಿಗೆ ವಿಶೇಷ ಹಿಡಿತವಿದೆ. ಈಕೆ ರಂಗಭೂಮಿ ಕಲಾವಿದೆ, ಕಥಕ್ ನೃತ್ಯಗಾರ್ತಿ, ಸಿನಿಮಾ , ಕಿರುತೆರೆ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ಆಗಾಗ್ಗೆ ಕಾಣಿಸಿಕೊಂಡಿರುವ ಇವರಿಗೆ ಈ  ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಒಲವಿದೆ. ಈಕೆ ಭಾಷಣಗಾರ್ತಿ, ಲೇಖಕಿ ಹಾಗೂ ನಿರೂಪಕಿ. ವರ್ಣಚಿತ್ರ, ವ್ಯಂಗ್ಯಚಿತ್ರ, ಟೈಲರಿಂಗ್, ಬ್ಲಾಗಿಂಗ್, ಛಾಯಾಗ್ರಹಣ, ವಿಡಿಯೋಗ್ರಾಫಿ ಹೀಗೆ ಹಲವು ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. 

ಆಪ್ತಿ ತಮ್ಮ ಹದಿನೇಳನೆಯ ವಯಸ್ಸಿನಲ್ಲಿ 'Journey Under the Sky' ಎಂಬ ಗಮನಾರ್ಹ  ಕೃತಿಯನ್ನು ಪ್ರಕಟಿಸಿರುವುದು ವಿಶೇಷ.  ಇವರು ರೈನಥಾನ್, ಫ್ಲಾಗಥಾನ್, ಮೂನಥಾನ್ ಮೊದಲಾದ ಜನಪ್ರಿಯ ಕಾರ್ಯಕ್ರಮ(Event)ಗಳನ್ನು ನಡೆಸಿಕೊಂಡು ಬಂದಿದ್ದಾರೆ. ಕೊರೋನಾ ಸಮಯದಲ್ಲಿ ಶಿಶುಗೀತೆ, ಜನಪದ ಗೀತೆಗಳಾದ ರೊಟ್ಟಿ ಅಂಗಡಿ ಕಿಟ್ಟಪ್ಪ, ಭಾಗ್ಯದ ಬಳೆಗಾರ, ಮುಂಜಾನೆದ್ದು ಕುಂಬಾರಣ್ಣ ಮೊದಲಾದ ಗೀತೆಗಳಿಗೆ ಸಿನಿಮೆಟೋಗ್ರಾಫಿ ಮಾಡಿದ್ದಾರೆ.  ಶ್ರಾವಿಂಧ್ಯ ಸಾಮ್ರಾಜ್ಯ, ಚಂದ್ರಹಾಸ, ಮತ್ತೊಬ್ಬ ರಾಧೆ, ಪುಟ್ಟರಾಜ ಗವಾಯಿಗಳು, ವಿಶ್ವಾರಾಧ್ಯ ಮೊದಲಾದ ಕನ್ನಡ ನಾಟಕಗಳಲ್ಲಿನ ಪ್ರಮುಖ ಪಾತ್ರಗಳಲ್ಲಿ ಹಲವು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ.  ರಾಮಾಯಣಕ್ಕೆ   ಆಂಗ್ಲಭಾಷೆಯಲ್ಲಿ ರಂಗಪಠ್ಯ ಬರೆದು, ಸಹನಿರ್ದೇಶಕಿಯಾಗಿ ಅದರಲ್ಲಿ ಪಾತ್ರ ಕೂಡ ಮಾಡುತ್ತಿದ್ದಾರೆ.  

ಆಪ್ತಿ ಅವರು ಮನಃಶಾಸ್ತ್ರದ ಮೇಲಿನ ವಿಶೇಷ ಒಲವಿನಿಂದ ಅದರಲ್ಲೇ ಪದವಿ ವ್ಯಾಸಂಗವನ್ನು ಜೈನ್ ವಿಶ್ವವಿದ್ಯಾಲಯದಲ್ಲಿ ನಡೆಸುತ್ತಿದ್ದಾರೆ.

ನಗುಮುಖದ, ಸ್ನೇಹಭಾವದ ಜನರೆಲ್ಲರೊಂದಿಗೆ ಬೆರೆಯಲು ಸಂತೋಷಿಸುವ ಬಹುಮುಖಿ ಯುವಪ್ರತಿಭೆ ಆಪ್ತಿ ಪಟವರ್ಧನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.

Happy birthday Aapti Patwardhan 🌷🌷🌷


(

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ