ರಾಹುಲ್ ದ್ರಾವಿಡ್ - ಸೌರವ್ ಗಂಗೂಲಿ
ರಾಹುಲ್ ದ್ರಾವಿಡ್ - ಸೌರವ್ ಗಂಗೂಲಿ
ರಾಹುಲ್ ದ್ರಾವಿಡ್ - ಸೌರವ್ ಗಂಗೂಲಿ, ಇಬ್ಬರೂ ಭಾವುಕತೆಯಲ್ಲಿ ಮತ್ತು ನಡೆಯಲ್ಲಿ ವಿಭಿನ್ನರು. ಆದರೂ ಇಬ್ಬರೂ ಒಟ್ಟಿಗೆ ಆಡಿ ದೇಶಕ್ಕಾಗಿ ಮಾಡಿದ ಸಾಧನೆ ಅದ್ಭುತ. ಇಬ್ಬರಲ್ಲೂ ಪಾರಸ್ಪರಿಕ ಗೌರವ. ದ್ರಾವಿಡ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಇರಲೇಬೇಕೆಂದು ಅವರನ್ನು ವಿಕೆಟ್ ಕೀಪರ್ ಆಗಿಸಿ ಸ್ಥಿರ ಅವಕಾಶ ಕಲ್ಪಿಸಿದ್ದು ಗಂಗೂಲಿ. ನನಗೇನೂ ಬೇಡ ಅಂತ ಯುವ ಆಟಗಾರರ ತರಬೇತಿ ಹೊಣೆ ನಿರ್ವಹಿಸುತ್ತಿದ್ದ ರಾಹುಲ್ ದ್ರಾವಿಡ್ ಅವರನ್ನು ಭಾರತೀಯ ತಂಡದ ಕೋಚ್ ಆಗಲು ಮನ ಒಲಿಸಿದ್ದು ಕೂಡ ಗಂಗೂಲಿ. ಗ್ರೆಗ್ ಚಾಪೆಲ್ ಗಂಗೂಲಿಯನ್ನು ಮಟ್ಟ ಹಾಕಲು ಅವನಿಗೆ ಬ್ಯಾಟಿಂಗ್ ಓಪನಿಂಗ್ ಮಾಡು ಎಂದರೆ, ಅದಕ್ಕೆ ಒಪ್ಪದ ರಾಹುಲ್ ದ್ರಾವಿಡ್, ತಾನೇ ಓಪನಿಂಗ್ ಬ್ಯಾಟಿಂಗ್ ಮಾಡಿದರು. ಹೀಗೆ ಅವರ ಜೋಡಿ.
ಈ ಇಬ್ಬರನ್ನೂ ಒಟ್ಟಿಗೆ ನೋಡುವುದು ಖುಷಿಯ ಸಂಗತಿ. ಸ್ನೇಹ ಅಂದರೇ ಒಂದೇ ರೀತಿಯಾಗಿ ಇರುವುದಲ್ಲ. ಪಾರಸ್ಪರಿಕ ನೈಜ ಗೌರವ.
ಕಾಮೆಂಟ್‌ಗಳು