ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೀಪಾ ದೇವಕತೆ

 

ದೀಪಾ ದೇವಕತೆ



ದೀಪಾ ದೇವಕತೆ ಅವರು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಪ್ರತಿಭಾನ್ವಿತ ಬರಹಗಾರ್ತಿ.


ಸೆಪ್ಟೆಂಬರ್ 22, ದೀಪಾ ದೇವಕತೆ ಅವರ ಹುಟ್ಟುಹಬ್ಬ.  ಇವರುಹುಟ್ಟಿದ ಊರು ವಿಜಯಪುರ.  ತಂದೆ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶ್ರೀ ದುಂಡಪ್ಪ ದೇವಕತೆ. ತಾಯಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ವಿಜಯಲಕ್ಷ್ಮಿ ಹುಡೇದ. ತಂದೆ ತಾಯಿ ಇಬ್ಬರೂ ಸಾಹಿತಿಗಳಾಗಿದ್ದು, ತಂದೆಯವರ "ಮಾಣಿಕ್ಯ ರತ್ನನ ವಚನಗಳು" ಮತ್ತು ತಾಯಿಯವರ "ಚೈತನ್ಯ" ಕವನ ಸಂಕಲನಗಳು ಪ್ರಕಟಗೊಂಡಿವೆ. ದೀಪಾ ಅವರು ಎಂ.ಎ (ಇಂಗ್ಲೀಷ್) ಮತ್ತು ಬಿ.ಇಡಿ ಓದಿದ್ದು  ಶಾಲಾ ಶಿಕ್ಷಕಿಯಾಗಿದ್ದಾರೆ.  ಇವರ ಕೌಟುಂಬಿಕ ನೆಲೆ ಬಾಗಲಕೋಟೆ.


ಓದು, ಬರವಣಿಗೆ ಮತ್ತು ಅನುವಾದ ದೀಪಾ ಅವರ ಅನುಪಮ ಆಸಕ್ತಿಗಳು.  ಮೊದ ಮೊದಲು ಸ್ವ-ಸಂತೋಷಕ್ಕಾಗಿ  ಮೂಡುತ್ತಿದ್ದ ಇವರ ಬರಹಗಳು ತದನಂತರದಲ್ಲಿ ಪುಸ್ತಕ ಪರಿಚಯ, ವಿಮರ್ಶೆ ಮತ್ತು ಅನುವಾದಗಳ ಕಡೆಗೆ ವಿಸ್ತರಿಸಿವೆ.  ಬರುವ ದಿನಗಳಲ್ಲಿ ಅವರ ಬೃಹತ್ ಇಂಗ್ಲಿಷ್ ಅನುವಾದ ಅನಾವರಣಗಳ್ಳಲಿದೆ. 


ದೀಪಾ ಅವರ ಈ ಕವಿತೆಗಳು ಮನಸೆಳೆಯುವಂತದ್ದು:


ಭ್ರಮಣೆ 


ಭೂಮಿ ಭ್ರಮಿಸಿ, ನಿನ್ನ ಬಿಸುಪುಗಳಿಗೆ ಮೈಯೊಡ್ಡಿದ್ದು ಅದರ ಭ್ರಮೆ;

ನಿನ್ನ ಪಾಡಿಗೆ ನೀ ಪ್ರಖರಗೊಳುವುದು ನಿನ್ನ ನಡೆ.

ಹೀಗಿದ್ದರೂ ಸಹಜ ಸೆಳೆತವೆನ್ನುತ ಒಲವಿಗೆ ಮೊರೆಯಿಡುವುದೇಕೆ?


ತಂತಾನೇ ಸುತ್ತಿ ಅಗಣಿತ ಪರಿಭ್ರಮಣೆಗಳು 

ಅವಿರತವಾಗಿರಲು ಅದೆಲ್ಲಿಯ ನಿಶೆ? 

ಈ ಜೀವಗಳಿಗಷ್ಟೆ ಹಗಲಿರುಳು

ನಮಗದು ಕೇವಲ ಕ್ಷಣಿಕ ಕತ್ತಲೆಯಷ್ಟೆ..! 


River has a memory 


River has a memory 

When I used to see that often

Leaving behind a glory

I never allow them rotten


A granny tosses coin into river

And bows with devotion,

May be praying for the everlasting flow

As crystal clear emotion


River has a memory


Feeds fisherman year over year

Little boat with a fishing pole

Catches no gigantic marlin 

But tiny fishes which struggle lasting roll


River has a memory


The temple immerses in rainy flow

What a bliss within for so long time!

Uncovers monument day after day

Steadily emerges out appearing divine


Dipping sun sets another night

Flock of birds swing at once

Arrowy flights destined height

Comes back with another dawn


ಪ್ರತಿಭಾನ್ವಿತೆ ಸಹೃದಯಿ ದೀಪಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ. 


Happy birthday Deepa Devakate 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ