ರೂಪಾ ಹೆಬ್ಬಾರ್
ರೂಪಾ ಹೆಬ್ಬಾರ್
ರೂಪಾ ಹೆಬ್ಬಾರ್ ಅವರು ಕೃಷಿಕರಾಗಿ ಮತ್ತು ಪ್ರಗತಿಶೀಲ ಉದ್ಯಮಿಯಾಗಿ ನಮ್ಮ ನಡುವೆ ವಿಶಿಷ್ಟರಾಗಿದ್ದಾರೆ.
ಸೆಪ್ಟೆಂಬರ್ 10, ರೂಪಾ ಹೆಬ್ಬಾರ್ ಅವರ ಜನ್ಮದಿನ. ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಅವರು ಮುಂದೆ ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡ ಎಂ.ಎ. ಪದವಿಯನ್ನೂ ಪಡೆದಿದ್ದಾರೆ. ಇವರು ಕೊಡಗಿನ ಸೋಮವಾರ ಪೇಟೆಯ ನಿವಾಸಿ.
ರೂಪಾ ಮತ್ತು ಅವರ ಪತಿ ಬಾಲಕೃಷ್ಣ ಹೆಬ್ಬಾರ್ ಇಬ್ಬರೂ ಕೃಷಿ ಕುಟುಂಬದಿಂದ ಬಂದವರು. ಬಾಲಕೃಷ್ಣ ಹೆಬ್ಬಾರ್ ಅವರು ಕಾರ್ಪೋರೇಟ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2007ರಲ್ಲಿ ಈ ದಂಪತಿಗಳು ಕೊಡಗಿನ ಅಬ್ಬರುಕಟ್ಟೆಯಲ್ಲಿ ಕೃಷಿ ಭೂಮಿಯನ್ನು ಕೊಂಡು ವ್ಯವಸಾಯ ಕ್ಷೇತ್ರಕ್ಕೆ ಬಂದರು. ಕಾಫಿ, ಕಾಳು ಮೆಣಸು, ಬಾಳೆ, ಅಡಿಕೆ ಇತ್ಯಾದಿಗಳ ಪ್ರಧಾನ ಕೃಷಿ ಇವರದ್ದಾಗಿದೆ. ಬಾಲಕೃಷ್ಣ ಹೆಬ್ಬಾರ್ ಅವರು ಕಾರ್ಪೊರೇಟ್ ತರಬೇತಿಯಲ್ಲೂ ತೊಡಗಿದ್ದಾರೆ.
ಕೊರೊನಾ ಕಾಲದಲ್ಲಿ ಅನಿವಾರ್ಯ ಅಜ್ಞಾತವಾಸದ ಬಿಡುವು ಮತ್ತು ಆರ್ಥಿಕ ಒತ್ತಡ ರೂಪಾ ಹೆಬ್ಬಾರ್ ಅವರನ್ನು ಹೊಸ ದಿಕ್ಕಿನಲ್ಲಿ ಚಿಂತಿಸುವಂತೆ ಮಾಡಿತು. ತಾವು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಮಾಡುತ್ತಿದ್ದ ಸ್ವಾದಿಷ್ಟ ಉಪ್ಪಿನಕಾಯಿಗಳ ವಿಚಾರವನ್ನು, ಆಪ್ತರೊಬ್ಬರ ಸಲಹೆಯ ಮೇರೆಗೆ ಫೇಸ್ಬುಕ್ನಲ್ಲಿ ಧೃತಿ ಮಹಿಳಾ ಮಾರುಕಟ್ಟೆಯ Dhruti Mahila Marukatte
ಸಮೂಹದಲ್ಲಿ ಅಭಿವ್ಯಕ್ತಿಸಿದಾಗ, ಅದಕ್ಕೆ ಮೂಡಿದ ಪ್ರೋತ್ಸಾಹ ಆಶಾದಾಯಕವಾಯ್ತು. ರೂಪಾ ಹೆಬ್ಬಾರ್ ಅವರು ತಮ್ಮ ತೋಟದಲ್ಲಿ ಆಯಾ ಋತುಗಳಲ್ಲಿ ದೊರಕುವ ಹಣ್ಣು ತರಕಾರಿಗಳನ್ನು ಮೌಲ್ಯ ವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಿ ಯಶ ಸಾಧಿಸುತ್ತ ಮುನ್ನಡೆದಿದ್ದಾರೆ.
ರೂಪಾ ಹೆಬ್ಬಾರ್ ಅವರು ಕೃಷಿತಜ್ಞೆ, ಆರ್ಥಿಕ ತಜ್ಞೆ ಮತ್ತು ಮಾರಾಟ ತಜ್ಞೆ ಮಾತ್ರವಲ್ಲ. ಅವರಲ್ಲಿ ಪ್ರಕೃತಿ ಪ್ರೇಮ, ಸಾಂಸ್ಕೃತಿಕ ಅಸಕ್ತಿ, ಸ್ನೇಹ ಭಾವ ಮತ್ತು ಸಾಹಿತ್ಯ ಪ್ರೇಮಗಳು ಹದವಾಗಿ ಸಮ್ಮಿಳಿತಗೊಂಡಿವೆ. ಅವರ ಬರವಣಿಗೆಯೂ ಸುಂದರವಾದದ್ದು.
ರೂಪಾ ಹೆಬ್ಬಾರ್ ಅವರ ಸಾಧನೆಗಳು ಕೇಂದ್ರ ಸರ್ಕಾರದ ಮಿನಿಸ್ಟ್ರಿ ಆಫ್ ಫುಡ್ ಪ್ರೋಸೆಸಿಂಗ್ ಇಂಡಸ್ಟ್ರೀಸ್ ಪ್ರಕಟಣೆಗಳನ್ನೂ ಅಲಂಕರಿಸಿದೆ.
ಸಾಧಕಿ, ಸಾಹಸಿ, ಪ್ರತಿಭಾನ್ವಿತೆ ರೂಪಾ ಹೆಬ್ಬಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Roopa C N Hebbar
🌷🌷🌷
ಕಾಮೆಂಟ್‌ಗಳು