ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಚೂಡ


 ಚಂದ್ರಚೂಡ


ವೃತ್ತಿಯಲ್ಲಿ ವೈದ್ಯರಾದ ಡಾ. ಚಂದ್ರಚೂಡ ಕುಚಳ್ಳಿ ಅವರು ಸಾಹಿತ್ಯ, ಸಂಸ್ಕೃತಿ, ಪರಿಸರ, ಸಾಮಾಜಿಕ ಕಾಳಜಿಗಳಲ್ಲಿ ಪ್ರೀತಿ ಉಳ್ಳವರಾಗಿ, ಸೈಕ್ಲಿಂಗ್ ಹವ್ಯಾಸದಂತಹ ಉಲ್ಲಾಸಕರ ಹವ್ಯಾಸಗಳಿಂದ ಸದಾ ಸಕ್ರಿಯರಾಗಿದ್ದಾರೆ. 

ಚಂದ್ರಚೂಡ ಅವರು ಜನಿಸಿದ್ದು 1949ರ ಸೆಪ್ಟೆಂಬರ್ 10ರಂದು.  ಮೂಲತಃ ಇವರು ಗುಂಡ್ಲುಪೇಟೆ ಸಮೀಪದವರು. ಇವರ ತಾತ ಕುಚಳ್ಳಿ ಮಲ್ಲಪ್ಪನವರು ಮೈಸೂರು ಮಹಾರಾಜರಿಂದ ಸಾರ್ವಜನಿಕ ಸೇವೆಗೆ ಬಂಗಾರದ ಪದಕ ಗಳಿಸಿದವರು. ಇವರ ಹಿರಿಯ ತಲೆಮಾರು ಸಾರ್ವಜನಿಕ ಉದ್ದೇಶಗಳಿಗಾಗಿ ಬಹಳಷ್ಟು ಭೂಮಿ ಮತ್ತು ಸಂಪನ್ಮೂಲ ದಾನಗಳಿಗೆ ಪ್ರಸಿದ್ಧವಾಗಿತ್ತು. ಪ್ರಸಕ್ತ ಡಾ. ಚಂದ್ರಚೂಡ ಅವರು ತಮ್ಮ ಕುಟುಂಬದೊಂದಿಗೆ ಮೈಸೂರಿನಲ್ಲಿದ್ದಾರೆ. 

ವೈದ್ಯರಾಗಿ ಉತ್ತಮ ಹವ್ಯಾಸ ಮತ್ತು ಜೀವನ ಪ್ರೀತಿಗಳುಳ್ಳ ಆತ್ಮೀಯ ಚಂದ್ರಚೂಡ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ.

Happy birthday Chandra Chooda Kuchalli Sir 🌷🌷🌷






ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ