ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಂದತನಯ ಗೋವಿಂದನ

 


ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ ||ಪ||
 
ಬಂಧಗಳನು ಭವ ರೋಗಗಳೆಲ್ಲನೂ ನಿಂದಿಪದೀ ಮಿಠಾಯಿ ||ಅ || 

ದಧಿ ಘೃತ ಕ್ಷೀರಕ್ಕಿಂತಲು ಇದು ಬಹು ಅಧಿಕವಾದ ಮಿಠಾಯಿ 
ಕದಳಿ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದೀ ಮಿಠಾಯಿ || 

ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ 
ಕಂಚೀಶನೆ ರಕ್ಷಿಸು ಎಂದುಸಿರುವರಂಜಿಕೆ ಬಿಡಿಪ ಮಿಠಾಯಿ || 

ಜಪ ತಪ ಸಾಧನಗಳಿಗಿಂತಲು ಬಹು ಅಪರೂಪದ ಮಿಠಾಯಿ 
ಜಿಪುಣಮತಿಗಳಿಗೆ ಸಾಧ್ಯವಿಲ್ಲದಿಹ ಪುರಂದರವಿಠಲ ಮಿಠಾಯಿ ||

ಸಾಹಿತ್ಯ: ಪುರಂದರದಾಸರು
ಗಾಯನ: ಡಾ. ಆರ್. ಕೆ. ಶ್ರೀಕಂಠನ್  

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ