ಶೋಭರಾಜ್
ಶೋಭರಾಜ್
ಶೋಭರಾಜ್ ಚಲನಚಿತ್ರರಂಗದ ಅತ್ಯುತ್ತಮ ಕಲಾವಿದರಲ್ಲೊಬ್ಬರು. ಬಹುತೇಕ ಚಲನಚಿತ್ರಗಳಲ್ಲಿ ಖಳಪಾತ್ರಗಳಲ್ಲಿಯೇ ಕಂಡರೂ ಅವರಲ್ಲಿ ಒಂದು ತೇಜಸ್ಸು ಎದ್ದು ಕಾಣುವಂತಿದೆ. ರಾಜ್‍ಕುಮಾರ್ ಮತ್ತು ವಿಷ್ಣುವರ್ಧನ್ ಅವರನ್ನೂ ಒಳಗೊಂಡಂತೆ ಎಲ್ಲ ಕಲಾವಿದರೊಂದಿಗೆ ನಟಿಸಿದ ಒಳ್ಳೆಯ ಹೆಸರು ಗಳಿಸಿರುವ ಕಲಾವಿದರಿವರು.
ಅಕ್ಟೋಬರ್ 22, ಶೋಭರಾಜ್ ಅವರ ಜನ್ಮದಿನ ಎಂದು ಕೆಲವು ಆತ್ಮೀಯರು ತಿಳಿಸಿದ್ದಾರೆ.
1990ರಲ್ಲಿ ಗೆಳೆಯ ರಘುವೀರ್ ಅವರ ಒತ್ತಾಸೆಯಿಂದ 'ಚೈತ್ರದ ಪ್ರೇಮಾಂಜಲಿ' ಚಿತ್ರದಲ್ಲಿ ನಟಿಸಿದ ಶೋಭರಾಜ್ ಅವರು ಮುಂದೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೆಲವು ಇತರ ಭಾಷಾ ಚಿತ್ರಗಳಲ್ಲೂ ನಟಿಸಿದ್ದಾರೆ.
ಶೋಭರಾಜ್ ಅವರು ನಟಿಸಿರುವ ಚಿತ್ರಗಳಲ್ಲಿ ಚೈತ್ರದ ಪ್ರೇಮಾಂಜಲಿ, ಗೋಲಿಬಾರ್, ಲಾಕಪ್ ಡೆತ್, ಪೋಲೀಸ್ ಸ್ಟೋರಿ, ಸ್ನೇಹಲೋಕ, ಶಬ್ದವೇಧಿ, ಗಲಾಟೆ ಅಳಿಯಂದ್ರು, ಸಿಂಹಾದ್ರಿಯ ಸಿಂಹ, ಹೃದಯವಂತ, ಮೌರ್ಯ, ಸ್ವಾಮಿ, ಸುಂಟರಗಾಳಿ, ಡೆಡ್ಲಿ ಸೋಮ, ವಾಲ್ಮೀಕಿ, ವರ್ಷಾ, ಅಯ್ಯ, ಶಂಕರ್IPS, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಪವರ್, ಶ್ರೀ ಚಕ್ರಮ್, ವೀರ ರಣಚಂಡಿ, ಯುಗಪುರುಷ, ಭಾನು ವೆಡ್ಸ್ ಭೂಮಿ, ಗಿಮಿಕ್, ಗಡಿನಾಡು, ಓಂ ಶಾಂತಿ ಓಂ, ಕೃಷ್ಣ ಟಾಕೀಸ್, ಕೋಟಿಗೊಬ್ಬ 3,ಗೋವಿಂದಾ ಗೋವಿಂದಾ, ಸಖತ್ ಮುಂತಾದವು ಸೇರಿವೆ.
ಶೋಭಾಯಮಾನ ಕಲಾವಿದ ಶೋಭರಾಜ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
On the birthday of actor Shobharaj 🌷🌷🌷

ಕಾಮೆಂಟ್‌ಗಳು