ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುಳ್ಳೂರು ಶ್ರೀಕಂಠಯ್ಯ


 ಮುಳ್ಳೂರು ಶ್ರೀಕಂಠಯ್ಯ

ಮುಳ್ಳೂರು ಶ್ರೀಕಂಠಯ್ಯನವರು ನಾವು ಚಿಕ್ಕವರಿದ್ದಾಗಿಂದಲೂ ಕಂಡು ಪ್ರೇರಣೆ ಪಡೆದ,  ಹಾಸನದಲ್ಲಿನ,  ಸಾಂಸ್ಕೃತಿಕ ಲೋಕದ ಕೇಂದ್ರಬಿಂದು. 

ಅಕ್ಟೋಬರ್ 15,  ಶ್ರೀಕಂಠಯ್ಯನವರ ಜನ್ಮದಿನ.  ವೃತ್ತಿಯಲ್ಲಿ ಇಂಜಿನಿಯರ್ ಆದ ಅವರು ಸದಾ ಸಮಾಜಮುಖಿಯಾಗಿ, ಸಾಂಸ್ಕೃತಿಕ ಸಂಘಟನೆಗಳ ಕೇಂದ್ರಬಿಂದುವಾಗಿ ಸೇವೆ ಸಲ್ಲಿಸುತ್ತ ಬಂದವರು. ಶ್ರೀಕಂಠಯ್ಯ ಮತ್ತು ಅವರ ಪತ್ನಿ ರತ್ನಾ  ಇಬ್ಬರೂ ನಾವು ಮಕ್ಕಳಾಗಿದ್ದಾಗಲಿಂದ ಅಪಾರ ಅಕ್ಕರೆ ಹರಿಸಿದವರು.  ಈ ದಂಪತಿಗಳು ನೀಡಿದ ನಿರ್ಮಲ ಪ್ರೀತಿ, ಪೋಷಣೆ, ಬೆಂಬಲಗಳಿಂದ ನಾವು ಮೇಲೆ ಬಂದೆವು ಎಂದು ಹೇಳುವವರು ಅನೇಕ.  

ಹಲವಾರು ಸಂಘಟನೆಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಶ್ರೀಕಂಠಯ್ಯನವರು ಹಲವಾರು ವರ್ಷಗಳಿಂದ  ಹಾಸನದ ಶ್ರಂಗೇರಿ ಶ್ರೀ ಶಂಕರ ಮಠದ ಧರ್ಮಾಧಿಕಾರಿಗಳಾಗಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ.  

ಶ್ರೀ ಶಾರದಾ ತಾಯಿಯ ಕೃಪೆ ಶ್ರೀಕಂಠಯ್ಯನವರ ಮೇಲೆ ಸದಾ ಇರಲಿ.  ಶ್ರೀಕಂಠಯ್ಯ - ರತ್ನಾ ದಂಪತಿಗಳ ಅಕ್ಕರೆಯ ಆಶೀರ್ವಾದ ನಮ್ಮ ಜೊತೆ ಸದಾ ಇರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಸುತ್ತಿರುವೆ.  🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ