ಆದದ್ದೆಲ್ಲ ಒಳಿತೇ ಆಯಿತು
ಆದದ್ದೆಲ್ಲ ಒಳಿತೇ ಆಯಿತು ನಮ್ಮ
ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ||ಪ||
ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮುಂದೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರ ವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ ||೧||
ಗೋಪಾಲ ಬುಟ್ಟಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ
ಆ ಪತ್ನೀಕುಲ ಸಾವಿರವಾಗಲಿ
ಗೋಪಾಲ ಬುಟ್ಟಿ ಹಿಡಿಸಿದಳಯ್ಯ ||೨||
ತುಳಸೀ ಮಾಲೆ ಹಾಕುವುದಕ್ಕೆ
ಅರಸನೆಂದು ತಿರುಗುತಲಿದ್ದೆ
ಸರಸಿಜಾಕ್ಷ ಶ್ರೀ ಪುರಂದರ ವಿಠಲನು
ತುಳಸಿಮಾಲೆ ಹಾಕಿದನಯ್ಯ ||೩||
ಚಿತ್ರ : ನವಕೋಟಿ ನಾರಾಯಣ
ಸಾಹಿತ್ಯ: ಪುರಂದರ ದಾಸರು
ಗಾಯನ: ಎಂ. ಬಾಲಮುರಳಿ ಕೃಷ್ಣ
ಸಂಗೀತ: ಶಿವಪ್ರಸಾದ್
ನಿರ್ದೇಶನ: ಎಸ್. ಕೆ. ಅನಂತಾಚಾರಿ
ಕಾಮೆಂಟ್‌ಗಳು