ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೃಣಾಲಿನಿ ಪಿ. ಅಗರಖೇಡ್


ಮೃಣಾಲಿನಿ ಪಿ. ಅಗರಖೇಡ್ 

ಮೃಣಾಲಿನಿ ಪಿ. ಅಗರಖೇಡ್ ಬಹುಮುಖಿ ಪ್ರತಿಭಾನ್ವಿತರು ಮತ್ತು ವಿಶಿಷ್ಟ ಬರಹಗಾರ್ತಿ. 

ಅಕ್ಟೋಬರ್ 11, ಮೃಣಾಲಿನಿ ಅವರ ಜನ್ಮದಿನ. ಅವರು ಹುಟ್ಟಿದ್ದು ಮಹಾರಾಷ್ಟ್ರದ ಮಿರಜ ಎಂಬಲ್ಲಿ.  ಬೆಳೆದದ್ದು ಬಾಗಲಕೋಟೆಯಲ್ಲಿ.  ತಂದೆ ವಿ. ಎಸ್. ಬಾಗೇವಾಡಿಕರ್ ನಿವೃತ್ತ ಭಾಷಾ ಶಿಕ್ಷಕರು. ತಾಯಿ  ಜಯಶ್ರೀ ಬಾಗೇವಾಡಿಕರ್ ಗೃಹಿಣಿ. ಪತಿ ಪಿ. ಎಸ್. ಅಗರಖೇಡ್ ಬೆಂಗಳೂರಿನ ನೆಲೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್.  ಮೃಣಾಲಿನಿ ಎಂಕಾಂ. ಮತ್ತು ಎಂ. ಫಿಲ್ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. 

ಮೃಣಾಲಿನಿ ಅವರು ಹಲವಾರು ವರ್ಷ ಕಾಮರ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದವರು.   ಪ್ರಸ್ತುತ ಅವರು ಫ್ರೀ ಲಾಂನ್ಸಿಂಗ್ ಕಂಟೆಂಟ್ ರೈಟರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಬ್ಲಾಗರ್ ಆಗಿ ಬರೆಯುವ ಹವ್ಯಾಸವೂ ಇವರ ಜೊತೆಗೂಡಿದೆ. ಇವರು ಇಂಗ್ಲಿಷ್, ಹಿಂದಿ, ಹಾಗೂ ಮಾತೃ ಭಾಷೆ ಕನ್ನಡದಲ್ಲಿ ಬರವಣಿಗೆ ಮಾಡುತ್ತಿರುವ ಬಹುಭಾಷಾ ಬರಹಗಾರ್ತಿ.  ಜೊತೆಗೆ ಸಂಸ್ಕೃತವನ್ನೂ ಚೆನ್ನಾಗಿ ಬಲ್ಲರು. 

ಮೃಣಾಲಿನಿ ಅವರಿಗೆ ಶಾಲಾ- ಕಾಲೇಜು ದಿನಗಳಿಂದಲೇ ಬರವಣಿಗೆಯಲ್ಲಿ ಆಸಕ್ತಿ ಇತ್ತು. ಆದರೆ ಅವರಿಗೆ ಸೂಕ್ತ ವೇದಿಕೆ ಸಿಕ್ಕಿದ್ದು  ತಾಯಂದಿರಿಗಾಗಿ ವಿಶೇಷವಾಗಿ ರೂಪಿಸಿದ ವೇದಿಕೆ ‘ಮಾಮ್ಸ್ ಪ್ರೆಸ್ಸೋ’ ದಿಂದ. 2020 ವರ್ಷದಿಂದ ಸಕ್ರಿಯ ಬ್ಲಾಗರ್ ಆಗಿ,  ಹಾಸ್ಯ, ಲಲಿತ ಪ್ರಬಂಧ, ಕೋಟ್ಸ್, ಸಣ್ಣ ಕಥೆ, ಲೇಖನಗಳು, ಪ್ರಬಂಧಗಳು, ಸಿನಿಮಾ ವಿಮರ್ಶೆ, ಪುಸ್ತಕ ಪರಿಚಯದಂಥ ಬಹು ಪ್ರಕಾರದಲ್ಲಿ ಬರವಣಿಗೆಯನ್ನು ಮಾಡುತ್ತಿದ್ದಾರೆ.  ಇವರ ಬರಹಗಳು ಅನೇಕ ಮಾಧ್ಯಮಗಳಲ್ಲಿ ಕಂಗೊಳಿಸಿವೆ.  ಕಳೆದ 4 ವರ್ಷದಿಂದ ದಾಸ ಸಾಹಿತ್ಯ ಅಧ್ಯಯನ, ಜೊತೆಗೆ ಆಧ್ಯಾತ್ಮಿಕ  ಲೇಖನಗಳನ್ನು ಬರೆಯುವ ಹವ್ಯಾಸವೂ ಇವರೊಂದಿಗಿದೆ. ಇಂಗ್ಲಿಷ್ ಹಾಗು ಕನ್ನಡ ಅನುವಾದದಲ್ಲಿಯೂ  ತೊಡಗಿದ್ದಾರೆ.

ಮೃಣಾಲಿನಿ ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ಬೆಂಗಳೂರು ವಿಭಾಗದ ಸದಸ್ಯರು.  ಇವರ ಇತರ  ಹವ್ಯಾಸಗಳಲ್ಲಿ ಓದುವುದು, ನಿರೂಪಣೆ, ಅಡುಗೆ, ವಿಡಿಯೋ ಎಡಿಟಿಂಗ್, ರೀಲ್ಸ್, ರಂಗೋಲಿ, ಚಿತ್ರಕಲೆ, ಹಾಡುವುದು ಮುಂತಾದವು ಸೇರಿವೆ.  ಇವರು ಬೆಂಗಳೂರು AIR Rainbow FM ಟಾಕ್ ಶೋ ದಲ್ಲಿ ಭಾಗವಹಿಸಿದ್ದಾರೆ.

ಬಹುಮುಖಿ ಪ್ರತಿಭಾನ್ವಿತ ಉತ್ಸಾಹಿ, ಸಹೃದಯಿ ಮೃಣಾಲಿನಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Mrinalini Bagewadikar Agarkhed 🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ