ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಜಿ. ಲಿಂಗದೇವರು


 ಕೆ. ಜಿ. ಲಿಂಗದೇವರು


ಕೆ. ಜಿ. ಲಿಂಗದೇವರು ನಾಡಿನ ಹೆಸರಾಂತ ಕಲಾವಿದರಾಗಿದ್ದಾರೆ.

ಲಿಂಗದೇವರು ಅವರು ಬೆಂಗಳೂರು ಜಿಲ್ಲೆಯ ಕಡಬಗೆರೆಯಲ್ಲಿ 1963ರ ನವೆಂಬರ್ 1ರಂದು ಜನಿಸಿದರು, 1986ರಲ್ಲಿ ಎ. ಎನ್. ಸುಬ್ಬರಾಯರ ಕಲಾಮಂದಿರ ಶಾಲೆಯಿಂದ ಪದವಿ ಡಿಪ್ಲೋಮಾ ಸಾಧನೆ ಮಾಡಿದರು. ಪ್ರಸ್ತುತ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಲಿಂಗದೇವರು ಅವರು ನಾಡಿನ ಹಲವೆಡೆಗಳಲ್ಲಿ ವೈಯಕ್ತಿಕ ಕಲಾ ಪ್ರದರ್ಶನಗಳು ಹಾಗೂ ಮುಂಬೈನ ಪ್ರತಿಷ್ಠಿತ ಜಹಾಂಗೀರ್ ಆರ್ಟ್ ಗ್ಯಾಲರಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಮೂಹ ಪ್ರದರ್ಶನಗಳಲ್ಲಿ ಭಾಗಿಯಾಗಿ ಹೆಸರಾಗಿದ್ದಾರೆ. ಲಲಿತ ಕಲಾ ಅಕಾಡೆಮಿ, ನವದೆಹಲಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ದೇಶದಾದ್ಯಂತ ಅನೇಕ ಖಾಸಗಿ ಸಂಸ್ಥೆಗಳು ಆಯೋಜಿಸಿದ್ದ ವಿವಿಧ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 

ಲಿಂಗದೇವರು ಅವರಿಗೆ 1983-1985 ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಮೆರಿಟ್ ವಿದ್ಯಾರ್ಥಿವೇತನ ಸಂದಿತ್ತು ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ 2022 ರಲ್ಲಿ ವರ್ಣಶ್ರೀ ಪ್ರಶಸ್ತಿ, 2015 ರಲ್ಲಿ ಕುಂಚ ಕಲಾ ನಿಧಿ ಪ್ರಶಸ್ತಿ, ಪಾಂಡಿಚೇರಿ ಕಲಾ ಅಕಾಡೆಮಿಯಿಂದ ''ರಾಷ್ಟ್ರೀಯ ಪ್ರಶಸ್ತಿ'' ಸಂದಿತ್ತು.  ಇದಲ್ಲದೆ ಹಲವು ಬಾರಿ ಮೈಸೂರು ಕಲಾ ಮೇಳ ಪ್ರಶಸ್ತಿ, ಇಂಡಿಯನ್ ರಾಯಲ್ ಅಕಾಡೆಮಿ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಅವರ ಕೃತಿಗಳು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಖಾಸಗಿ ಸಂಗ್ರಹಗಳಲ್ಲಿವೆ.

ಕಲಾವಿದರಾದ ಕೆ. ಜಿ. ಲಿಂಗದೇವರು ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ 🌷🙏🌷

Happy birthday Kglingadevaru Lingadevaru 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ