ಶ್ರೀಧರ್
ಶ್ರೀಧರ್
ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು ಎಂದು ಹಾಡಿದ 'ಅಮೃತ ಘಳಿಗೆ' ನಾಯಕನ ಪಾತ್ರಧಾರಿಯಾದ ಶ್ರೀಧರ್ ಅವಿಸ್ಮರಣೀಯರು.
ಶ್ರೀಧರ್ ಅವರು 1960ರ ನವೆಂಬರ್ 22ರಂದು ಜನಿಸಿದರು. ಅವರು ಇಂಜಿನಿಯರಿಂಗ್ ಪದವೀಧರರು. ಅವರು ಮಹಾನ್ ನೃತ್ಯ ಕಲಾವಿದ. ಇವರ ಪತ್ನಿ ಅನುರಾಧಾ ಮತ್ತು ಪುತ್ರಿ ಅನಘಾ ಸಹಾ ನೃತ್ಯಕಲಾವಿದರು. ಶ್ರೀಧರ್ ಅವರು “ಭರತನಾಟ್ಯದಲ್ಲಿ ಪುರುಷ ನೃತ್ಯಕಾರನ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳು ( Socio-cultural aspects of the Male Dancer in Bharatanatyam)" ಎಂಬ ಮಹಾಪ್ರಬಂಧಕ್ಕೆ ಡಿ.ಲಿಟ್ ಗಳಿಸಿದ್ದಾರೆ.
ಶ್ರೀಧರ್ ಅವರು ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಅಮೃತ ಘಳಿಗೆ' ಚಿತ್ರದಲ್ಲಿ ನಟಿಸಿ ಹೆಸರಾಗಿ ಮುಂದೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸಂತ ಶಿಶುನಾಳ ಷರೀಫ ಚಿತ್ರದ ಅಭಿನಯಕ್ಕೆ ರಾಜ್ಯಪ್ರಶಸ್ತಿ ಪಡೆದಿದ್ದಾರೆ. ಗಿರೀಶ್ ಕಾಸರವಳ್ಳಿ ಅವರ 'ಬಣ್ಣದ ವೇಷ' ಚಿತ್ರದಲ್ಲಿನ ಇವರ ಪಾತ್ರ ನಿರ್ವಹಣೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಮಹಾನ್ ನಿರ್ದೇಶಕರಾದ ಕೆ ಬಾಲಚಂದರ್, ಕೆ. ವಿಶ್ವನಾಥ್ ಒಳಗೊಂಡಂತೆ ಅನೇಕ ಇತರ ಭಾಷಾ ನಿರ್ದೇಶಕರ ಚಿತ್ರಗಳಲ್ಲಿ ಶ್ರೀಧರ್ ನಟಿಸಿದ್ದಾರೆ.
ಶ್ರೀಧರ್ ತಮ್ಮ ಪತ್ನಿ ಅನುರಾಧಾ ಅವರೊಂದಿಗೆ ನೃತ್ಯಕಲಾ ಜೋಡಿಯಾಗಿ ಅಪಾರ ಹೆಸರು ಗಳಿಸಿದ್ದಾರೆ. ಈ ದಂಪತಿ ಅನೇಕ ಶ್ರೇಷ್ಠ ಕಲಾವೇದಿಕೆಗಳಿಂದ ಪ್ರಶಸ್ತಿ ಗೌರವಗಳಿಂದ ಸಂಮಾನಿತರಾಗಿದ್ದಾರೆ. ಇವರ ಸುಪುತ್ರಿ ಅನಘಾ ಸಹ ನೃತ್ಯಕಲಾವಿದೆಯಾಗಿದ್ದಾರೆ.
ಸರಳ ಸೌಮ್ಯ ಪ್ರತಿಭಾನ್ವಿತ ಸಜ್ಜನ ಕಲಾವಿದ ಡಾ. ಶ್ರೀಧರ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
On the birthday of Actor and Dancer Dr.Sridhar 🌷🙏🌷
ಕಾಮೆಂಟ್‌ಗಳು