ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಂದರಕೃಷ್ಣ ಅರಸ್


ಸುಂದರಕೃಷ್ಣ ಅರಸ್


ಸುಂದರ ಕೃಷ್ಣ ಅರಸ್ ಅಂದರೆ ಅವರ ಕಾಂತಿ ತುಂಬಿದ ಕಂಗಳ ಅಭಿನಯ ಹಾಗೂ ಅವರ ಅಮೋಘ ಧ್ವನಿ ನೆನಪಾಗುತ್ತದೆ.  ನವೆಂಬರ್ 8 ಅವರು ಈ ಲೋಕವನ್ನಗಲಿದ ದಿನ.

ಸುಂದರಕೃಷ್ಣ ಅರಸ್ ಅವರ ಹೆಸರು ಪ್ರಧಾನವಾಗಿ ಕಂಡದ್ದು 1973ರಲ್ಲಿ 'ಸಂಕಲ್ಪ' ಚಿತ್ರದಲ್ಲಿ.  ನಾಗರಹೊಳೆ, ಅಪರಿಚಿತ, ಒಂದಾನೊಂದು ಕಾಲದಲ್ಲಿ ಮುಂತಾದ ಪ್ರಾರಂಭಿಕ ಚಿತ್ರಗಳಲ್ಲೇ ತಮ್ಮ ಅಭಿನಯದಿಂದ ಮತ್ತು ಭವ್ಯ ಧ್ವನಿಯಿಂದ ಕನ್ನಡ ಚಿತ್ರಪ್ರೇಮಿಗಳ ಮನದಲ್ಲಿ ನೆಲೆನಿಂತರು.  ದುರದೃಷ್ಟವಷಾತ್ ಚಿತ್ರರಂಗದವರು ಅವರನ್ನು ಹೆಚ್ಚು ಖಳಪಾತ್ರಗಳಿಗೇ ಬಳಸಿದರು.  ಅವರು ಅಭಿನಯಿಸಿದ ಪೋಷಕ ಪಾತ್ರಗಳಲ್ಲಿನ ಅಭಿನಯವೂ ಚೆನ್ನಾಗಿರುತ್ತಿತ್ತು.  ಕನ್ನಡವಲ್ಲದೆ ಇತರ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದರು.

ಒಂದಾನೊಂದು ಕಾಲದಲ್ಲಿ ಚಿತ್ರದ ಪೆರ್ಮಾಡಿಯಾಗಿ ಸುಂದರಕೃಷ್ಣ ಅರಸ್ ಅವರ ಧೀಮಂತ ಅಭಿನಯ ಮರೆಯಲಾಗದ್ದು.

1941ರಲ್ಲಿ ಜನಿಸಿದ ಸುಂದರಕೃಷ್ಣ ಅರಸ್ ಇನ್ನೂ 52ರ ವಯಸ್ಸಿನಲ್ಲೇ 1993 ನವೆಂಬರ್ 8ರಂದು ಈ ಲೋಕವನ್ನಗಲಿದರು.

On Remembrance Day of Great actor of amazing voice Sunder Krishna Urs 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ