ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಮತಾ ವೆಂಕಟೇಶ್


 ಮಮತಾ ವೆಂಕಟೇಶ್


ಮಮತಾ ವೆಂಕಟೇಶ್ ಅವರು ನಾನು ಫೇಸ್ಬುಕ್ ಆವರಣದಲ್ಲಿ ಕಂಡ ಅದ್ಭುತ ಓದುಗರು.

ಡಿಸೆಂಬರ್ 7 ಮಮತಾ ಅವರ ಜನ್ಮದಿನ.  ಕೃಷಿ ಕುಟುಂಬದವರಾದ ಮಮತಾ ಅವರ ಬರಹಗಳಲ್ಲಿ ಮಣ್ಣಿನ ಗುಣವಿದೆ.  

ಮಮತಾ ಅವರ ಓದು, ಎಲ್ಲ ರೀತಿಯಲ್ಲಿ ವಿಶಾಲ ವ್ಯಾಪ್ತಿಯದು.  ಅವರ ಓದಿನ ವಿಶಿಷ್ಟತೆಯೆಂದರೆ ತಾವು ಓದಿದ ಪುಸ್ತಕದ ಬಗ್ಗೆ ಹಾಗೂ ಅದರಲ್ಲಿ ತಾವು ಗ್ರಹಿಸಿದ್ದನ್ನು ಅಚ್ಚುಕಟ್ಟಾಗಿ ತಮ್ಮ ಬರಹದಲ್ಲಿ ಮೂಡಿಸುತ್ತಾರೆ.

ನೀವು ಇಷ್ಟು ಚೆನ್ನಾಗಿ ಬರೀತೀರಿ, ಬರೆಯಿರಿ ಅಂದರೆ, ಇಲ್ಲ ಸಾರ್ ನನಗೆ ಓದುವುದೇ ಹೆಚ್ಚು ಇಷ್ಟ ಎನ್ನುತ್ತಾರೆ.  "ಊರಿಗೆ ಊರೇ ಹಸೆಯಲಿ ನಿಂತರೆ ಆರತಿ ಬೆಳಗಲು ಜನವೆಲ್ಲಿ" ಎಂಬ ಕೆಎಸ್‍ನ ಅವರ ಕವಿತೆ ನೆನಪಾಗುತ್ತದೆ.  ಎಲ್ಲರಿಗೂ ಬರೆಯಬೇಕೆಂಬ ಧಾವಂತದಲ್ಲಿ ಬರೆಯುವರೇ ಹೆಚ್ಚಾಗಿ ಓದುವಿಕೆ ಕಡಿಮೆ ಆಗಿರುವ ಕಾಲದಲ್ಲಿ, ಓದುವುದೇ ಉಪಯುಕ್ತ ಎಂಬ ನಿಲುವಿನ ಓದಿನ ಮಮತೆಯ ಮಮತಾ ಅವರು ನನಗಂತೂ ವಿಶಿಷ್ಟರು. ಅವರ ಓದು, ಓದಿದ್ದನ್ನು ಪ್ರಸ್ತುತ ಪಡಿಸುವ ರೀತಿ, ಬಳಸುವ ಭಾಷೆ ಎಲ್ಲವೂ ಒಪ್ಪವಾದದ್ದು. 

ಹಸನ್ಮುಖಿ, ಅಧ್ಯಯನಾಕಾಂಕ್ಷಿ, ಸಾಂಸ್ಕೃತಿಕ ಮನೋಭಾವದ ಹಸನ್ಮುಖಿ ಮಮತಾ ವೆಂಕಟೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Mamatha Venkatesh 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ