ಮನಸು ಕರಗದೆ
ಮನಸು ಕರಗದೆ ಸ್ವಾಮಿ ದಯವು ಬಾರದೆ
ದೀನನಾಗಿ ನಿನ್ನ ಪಾದ ನಂಬಿದೆನೋ ದಯಾಸಿಂಧು
ಒಡಲಿಗೋಸುಗವಾಗಿ ಪರರ ಅಡಿಗಳಿಗೆ ನಮಿಸಿ ಅವರ
ಬಿರು ನುಡಿಗಳ ಕೇಳಲಾರೆ ಬೇಡಲಾರೆ ಹೇ ಮುರಾರೇ
ಜನನಿ ಜನಕ ನೀನೇ ಎಂದು ಎನುವೆನಯ್ಯ ದೀನಬಂಧು
ಎನ್ನ ಪಾಲಿಸೋ ಈಗ ಬಂದು ಮನ್ನಿಸಯ್ಯ ಕೃಪಾಸಿಂಧು
ದಿನವು ಕಳೆದು ಹೋಯಿತಲ್ಲ ಪ್ರಾಣೇಶ ವಿಠಲ
ಮನ್ನಿಸುವರು ಒಬ್ಬರಿಲ್ಲ ಕಾಯೋ ಬಾಲಗೋಪಾಲ
ಸಾಹಿತ್ಯ: ಪ್ರಾಣೇಶ ವಿಠಲದಾಸರು
ಗಾಯನ: ವಿದ್ಯಾಭೂಷಣ ಸ್ವಾಮೀಜಿ🌷🙏🌷
ಕಾಮೆಂಟ್‌ಗಳು