ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏಳೆನ್ನ ಮನದನ್ನೆ


ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ
ಏಳು ಮಂಗಳದಾಯಿ ಉಷೆಯ ಗೆಳತಿ
ಏಳು ಮುದ್ದಿನ ಚಂಡೆ ಏಳು ಮಲ್ಲಿಗೆ ದಂಡೆ
ಏಳು ಬಣ್ಣದ ಬಿಲ್ಲೆ ಮಾಟಗಾತಿ

ಏಳೆನ್ನ ಕಲ್ಯಾಣಿ ಏಳು ಭಾವದ ರಾಣಿ
ನೋಡು ಮೂಡಣದಲ್ಲಿ ರಾಗ ಮಿಲನ
ಮರೆದುದಿಯ ತೋರಣದಿ ಹೊಂಬಿಸಿಲ ಬಾವುಟವು
ಗಾಳಿ ಬಟ್ಟೆಯಲದರ ಚಲನ ವಲನ

ಮoಜಿನರಳೆಯ ಹಿಂಜಿ ತೋರುತಿಹ ನೇಸರನು
ಹಿಮಮಣಿಯ ದರ್ಪಣದಿ ತನ್ನ ಕಂಡು
ಮಿರುಗಿ ಹೋಗರೇರಿಹನು ಏಳೆನ್ನ ಹೊಂಗೆಳತಿ
ಮೊಗದಾ ಜವನಿಕೆ ತೊರೆದು ನಗೆಯ ನೀಡು

ಲಲಿತ ಶೃoಗಾರ ರಸಪೂರ್ಣೆ ಚoದಿರವರ್ಣೆ
ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
ಒಂದು ಚಣ ಜಗವನ್ನೇ ಮರೆತುಬಿಡುವೆ

ಸಾಹಿತ್ಯ: ಚನ್ನವೀರ ಕಣವಿ

At Jumeira Lake Towers, Dubai


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ