ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಾರ್ಥನೆ


ನಿನ್ನ ಬಾಂದಳದಂತೆ
ನನ್ನ ಮನವಿರಲಿ;
ನಿನ್ನ ಸಾಗರದಂತೆ
ನನ್ನ ಎದೆಯಿರಲಿ.

ನಿನ್ನ ಸುಗ್ಗಿಯ ತೆರದಿ
ನನ್ನ ಸೊಬಗಿರಲಿ;
ನಿನ್ನ ಲೀಲೆಯ ತೆರದಿ
ನನ್ನ ಬಾಳಿರಲಿ

ನಿನ್ನ ಬಲವಿರುವಂತೆ
ನನ್ನ ಬಲವಿರಲಿ;
ನಿನ್ನ ತಿಳಿವಿರುವಂತೆ
ನನ್ನ ತಿಳಿವಿರಲಿ

ನಿನ್ನೊಲ್ಮೆಯಂದದಲಿ
ನನ್ನೊಲ್ಮಯಿರಲಿ;
ನಿನ್ನಾಳವೆನಗಿರಲಿ
ನೀನೆ ನನಗಿರಲಿ;

ನಿನ್ನಾತ್ಮದಾನಂದ
ನನ್ನದಾಗಿರಲಿ;
ನಿನ್ನೊಳಿರುವಾ ಶಾಂತಿ
ನನ್ನೆದೆಗೆ ಬರಲಿ.

ಕವಿತೆ: ಪ್ರಾರ್ಥನೆ
ಸಾಹಿತ್ಯ: ಕುವೆಂಪು

Photo: At Jumeira Lake Towers, Dubai 


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ